ಬಂಟ್ವಾಳ : ಫರಂಗಿಪೇಟೆಯ ವಿಜಯನಗರದಲ್ಲಿ ಆಂಜನೇಯ ದೇವಸ್ಥಾನ ನಿರ್ಮಾಣ ಸಮಿತಿಯ ಮತ್ತು ಶ್ರೀ ರಾಮನಾಮ ತಾರಕ ಜಪ ಯಜ್ಞ ಸಮಿತಿ ಅಶ್ರಯದಲ್ಲಿ ಶ್ರೀ ರಾಮನಾಮ ತಾರಕ ಜಪ ಯಜ್ಞ ಹಾಗೂ ಆಂಜನೇಯ ದೇವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದ ಪೂರ್ವಭಾವಿಯಾಗಿ ಹಸಿರು ವಾಣಿ ಹೊರೆ ಕಾಣಿಕೆಯ ಆಕರ್ಷಕ ಮೆರವಣಿಗೆಗಯು ಬ್ರಹ್ಮರಕೊಟ್ಲು ಬ್ರಹ್ಮ ಸನ್ನಿದಿಯಿಂದ ಪ್ರಾರಂಭಗೊಂಡಿತ್ತು
ಅರ್ಚಕರಾದ ಮುರಳಿ ಭಟ್ ಕಲ್ಲತಡಮೆ ಬ್ರಹ್ಮ ಸನ್ನಿಧಿ ಯಲ್ಲಿ ಪ್ರಾರ್ಥಿಸಿದರು, ಹಸುರುವಾಣಿ ಹೊರೆ ಕಾಣಿಕೆಯ ವಾಹನಕ್ಕೆ ಜ್ಯೋತಿಷಿ ಸಿ ವಿ ಪೊದುವಾಲ್ ಹಾಗೂ ಪುರುಷೋತ್ತಮ್ ಶೆಟ್ಟಿ ನೂಳಿಯಾಳ ಗುತ್ತು ಇವರು ತೆಂಗಿನ ಕಾಯಿ ಹೊಡೆದು ಚಾಲನೆ ನೀಡಿದರು.
ನೂರಾರು ವಾಹನ ಜಾಥಾದೊಂದಿಗೆ ಸಾಗಿದ ಶೋಭಾಯಾತ್ರೆಯಲ್ಲಿ ಚೆಂಡೆ, ಕೊಂಬು ವಾದ್ಯ ಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು, ಅಲ್ಲಲ್ಲಿ ಭಕ್ತರು ಸ್ವಾಗತಿಸಿದರು.ರಸ್ತೆಯುದ್ಧಕ್ಕೋ ಭಗವಧ್ವಜ ರಾರಾಜಿಸುತಿತ್ತು.ಹೆಚ್ಚಿನ ಸಂಖ್ಯೆಯಲ್ಲಿ ಭಾಗವದ್ಬಕ್ತರು ಶ್ರದ್ಧಾಭಕ್ತಿಯಿಂದ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡರು.ದೇವರ ಪಾಲು
ನಿಂದ ಪಾದಯಾತ್ರೆಯಲ್ಲಿ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ದೇಗುಲ ನಿರ್ಮಾಣ ಸಮಿತಿ ಅಧ್ಯಕ್ಷ ಅಜಿತ್ ಚೌಟ,ಕೊಡಮಣ್ಣು ಕಾಂತಪ್ಪ ಶೆಟ್ಟಿ, ಪ್ರ.ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಜಪ ಯಜ್ಞ ಸಮಿತಿ ಅಧ್ಯಕ್ಷ ಅನಿಲ್ ಪಂಡಿತ್,ಕೆ ಜಿ ವಿಠ್ಠಲ ಆಳ್ವ, ಚಂದ್ರ ಶೇಖರ ಗಾಂಭೀರ ಸುಜಿರ್ ಗುತ್ತು,ರವೀಂದ್ರ ಕಂಬಳಿ, ತಾರಾನಾಥ ಕೊಟ್ಟಾರಿ, ಮನೋಜ್ ತುಪ್ಪಕಲ್ಲು, ಕರುಣಾಕರ ಕೊಟ್ಟಾರಿ ಅರ್ಕುಳ,ದಾಮೋದರ ನೆತ್ತರಕೆರೆ,ಸಂತೋಷ್ ಕುಮಾರ್, ಗಣೇಶ್ ಸುವರ್ಣ, ರಾಧಾಕೃಷ್ಣ ತಂತ್ರಿ,ಪದ್ಮನಾಭ ಪುಂಚಮೆ,ಹೊರೆ ಕಾಣಿಕೆ ಸಮಿತಿ ಸಂಚಾಲಕರಾದ ಸಂತೋಷ್ ಕೊಡ್ಮಾನ್, ಯೋಗೀಶ್ ಕುಮ್ದೇಲ್, ಮತ್ತಿತರರು ಉಪಸ್ಥಿತರಿದ್ದರು.














