ಮೈಸೂರು : ರಾಜೇಂದ್ರ ನಗರ ಛಾಯಾದೇವಿ ವಿದ್ಯಾ ಸಂಸ್ಥೆಯ ಆವರಣದಲ್ಲಿ, ಬಿಜೆಪಿ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಡಿ. 24 ರ ಶನಿವಾರ ಮಧ್ಯಾಹ್ನ 3:30 ಗಂಟೆಗೆ ಅಟಲ್ ಬಿಹಾರಿ ವಾಜಪೇಯಿರವರ ಜನುಮ ದಿನದ ಅಂಗವಾಗಿ ಕೆಇಬಿ ಚೌಲ್ಟ್ರಿಯಲ್ಲಿ ದೇಶಭಕ್ತರ ಚಿತ್ರಕಲಾ ಸ್ಪರ್ಧೆ, ಹಾಗೂ ದೇಶಭಕ್ತಿ ಗೀತೆ ಕಾರ್ಯಕ್ರಮದ ಪೋಸ್ಟರ್ ನ್ನು ಕ್ಷೇತ್ರದ ಅಧ್ಯಕ್ಷ ಡಾ ಭಾನುಪ್ರಕಾಶ್ ರವರು ಬಿಡುಗಡೆ ಮಾಡಿದರು.
ದೇಶದ ನೆಚ್ಚಿನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನುಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಯುವ ಮೋರ್ಚಾ ಪದಾಧಿಕಾರಿಗಳು, ಮಕ್ಕಳು , ಯುವಕ-ಯುವತಿಯರು, ಚಿತ್ರಕಲಾ ಪ್ರೇಮಿಗಳು ಹಾಗೂ ದೇಶಪ್ರೇಮಿಗಳಿಗೆ ಅತ್ಯಂತ ಅವಶ್ಯಕವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಟಲ್ ಬಿಹಾರಿ ವಾಜಪೇಯಿ ರವರು ಅತ್ಯಂತ ಅಪ್ಪಟ ದೇಶಪ್ರೇಮಿಯಾಗಿದ್ದು ಅವರ ಸಾಧನೆ ಮತ್ತು ಅವರ ದೇಶಪ್ರೇಮವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಆದ್ದರಿಂದ ಈ ಅರ್ಥಪೂರ್ಣ ಕಾರ್ಯಕ್ರಮವು ದೇಶಭಕ್ತರ ಸಂಬಂಧಪಟ್ಟಂತಹ ಕಾರ್ಯಕ್ರಮ ಆಗಿದ್ದರಿಂದ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಪ್ರಥಮ ದ್ವಿತೀಯ
ತೃತೀಯ ಪ್ರಶಸ್ತಿ ಹಾಗೂ ಪ್ರಶಸ್ತಿ ಪತ್ರವನ್ನು ಕೊಡಲಾಗುವುದು. ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರ ಕೊಡಲಾಗುವುದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ವಯೋಮಿತಿ
10 ರಿಂದ 18
18 ರಿಂದ ಮೇಲ್ಪಟ್ಟ ವಯಸ್ಕರಿಗೆ
ಹೆಚ್ಚಿನ ಮಾಹಿತಿಗಾಗಿ
ಡಿ ಲೋಹಿತ್
8105078070
ಕಾರ್ಯಕ್ರಮದಲ್ಲಿ ಕ್ಷೇತ್ರದ ಮಂಡಲ ಅಧ್ಯಕ್ಷರಾದ ಶ್ರೀ ಡಾ ಪ್ರಭಾನುಪ್ರಕಾಶ್ ರವರು, ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ ಲೋಹಿತ್ ಕ್ಷೇತ್ರದ ಕಾರ್ಯದರ್ಶಿಗಳಾದ ಸ್ಮಾರ್ಟ್ ಮಂಜು, ಕ್ಷೇತ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ಹಾಗೂ ಕಾರ್ಯದರ್ಶಿಗಳಾದ ಮನೋಜ್, ಮುಂತಾದವರು ಉಪಸ್ಥಿತರಿದ್ದರು.














