ಸಿದ್ಧಕಟ್ಟೆ: ಐದನೇ ವರ್ಷದ ಶಾರದಾ ಪೂಜಾ ಮಹೋತ್ಸವ. ಸನಾತನ ಹಿಂದೂ ಧರ್ಮ ಸಾಮರಸ್ಯದ ಪ್ರತೀಕ: ಮಾಜಿ ಸಚಿವ ರೈ

Coastal Bulletin
ಸಿದ್ಧಕಟ್ಟೆ: ಐದನೇ ವರ್ಷದ ಶಾರದಾ ಪೂಜಾ ಮಹೋತ್ಸವ. ಸನಾತನ ಹಿಂದೂ ಧರ್ಮ ಸಾಮರಸ್ಯದ ಪ್ರತೀಕ: ಮಾಜಿ ಸಚಿವ ರೈ

ಬಂಟ್ವಾಳ: ಜಗತ್ತನ್ನು ಪ್ರೀತಿಸುವ ಸನಾತನ ಹಿಂದೂ ಧರ್ಮ ಇತರ ಧರ್ಮಗಳನ್ನು ಗೌರವಿಸುವ ಮೂಲಕ ಸಾಮರಸ್ಯದ ಪ್ರತೀಕವಾಗಿದೆ. ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣನವರು ಇದೇ ಮಾನವೀಯ ಮೌಲ್ಯಗಳಿಂದ ಶ್ರೇಷ್ಟ ವ್ಯಕ್ತಿಗಳಾಗಿ ಕಾಣಿಸಿಕೊಂಡಿದ್ದಾರೆ ಎಂದು ಶಾರದೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಇಲ್ಲಿನ ಸಿದ್ಧಕಟ್ಟೆ ಕೇಂದ್ರ ಮೈದಾನದಲ್ಲಿ ವಲಯ ಸಾರ್ವಜನಿಕ ಶ್ರೀ ಶಾರದೋತ್ಸವ ಆಚರಣಾ ಸಮಿತಿ ವತಿಯಿಂದ ಶನಿವಾರ ಸಂಜೆ ನಡೆದ ಧಾಮರ್ಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧಾಮರ್ಿಕ ಚಿಂತಕ ಲಕ್ಷ್ಮೀಶ ಗಬ್ಲಡ್ಕ ಉಪನ್ಯಾಸ ನೀಡಿ, 'ನಿಷ್ಕಲ್ಮಶ ಭಕ್ತಿಯಿಂದ ಪ್ರಕೃತಿ ಮತ್ತು ವಿಗ್ರಹ ಆರಾಧಿಸುವ ಭಾರತೀಯರಲ್ಲಿ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಹಿಂದುತ್ವ ಅಳವಡಿಸಿಕೊಂಡಿದ್ದಾರೆ' ಎಂದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿ, ಯಾವುದೇ ಧಾಮರ್ಿಕ ಆಚರಣೆಯಲ್ಲಿ ರಾಜಕೀಯ ಸಲ್ಲದು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ನಮ್ಮ ಕುಡ್ಲ ಚಾನೆಲ್

ಮುಖ್ಯಸ್ಥ ಲೀಲಾಕ್ಷ ಕಕರ್ೇರ, ಸುಬ್ರಹ್ಮಣ್ಯ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂತರ್ಿ ಭಟ್, ಪೆರಾಡಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಕಾಶಿಪಟ್ನ, ಕಂಬಳ ಪ್ರೋತ್ಸಾಹಕ ಚಂದ್ರಹಾಸ ಸನಿಲ್, ವಕೀಲರಾದ ನಾಗೇಶ ಶೆಟ್ಟಿ ಮೂಡುಬಿದ್ರೆ, ರವಿಕಾನ ಬಿ.ಸಿ.ರೋಡು, ಉದ್ಯಮಿ ಗುರು ಮೂಡುಬಿದ್ರೆ, ಸಾರ್ವಜನಿಕ ಶ್ರೀ ಗಣೇಶೊತ್ಸವ ಸಮಿತಿ ಗೌರವಾಧ್ಯಕ್ಷ ನೋಣಯ ಶೆಟ್ಟಿಗಾರ್ ಮೊಯಿಲೊಟ್ಟು ಮತ್ತಿತರರು ಇದ್ದರು.

ಸಮಿತಿ ಸಂಚಾಲಕ ಜಗದೀಶ ಕೊಯಿಲ ಸ್ವಾಗತಿಸಿ, ಲೆಕ್ಕ ಪರಿಶೋಧಕ ಕೆ.ರಮೇಶ ನಾಯಕ್ ರಾಯಿ ವಂದಿಸಿದರು. ಕಲಾವಿದ ಪುರುಷೋತ್ತಮ ಕೊಯಿಲ ಕರ್ಯಕ್ರಮ ನಿರೂಪಿಸಿದರು.

Leave a Comment