ಬಂಟ್ವಾಳ: ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆರಾಧಿಸಲ್ಪಟ್ಟ 41 ನೇ ವರ್ಷದ ಸಾರ್ವಜನಿಕ ಶ್ರಿಗಣೇಶನ ಶೋಭಾಯಾತ್ರೆಯು ಗುರುವಾರ ಸಂಜೆ ವೈಭವಯುತವಾಗಿ ರಾ.ಹೆ.ಯ ರಾಜಾರಸ್ತೆಯಲ್ಲಿ ನಡೆಯಿತು.
ಉತ್ಸವ ಸ್ಥಳದಿಂದ ಹೊರಟ ಶ್ರೀಗಣೇಶನ ವಿಗ್ರಹದ ಶೋಭಾಯಾತ್ರೆಯು ರಾ.ಹೆ.ಯಲ್ಲಿ ಮಾರಿಪಳ್ಳ,ಕಡೇಗೋಳಿಯವರೆಗೆ ಸಾಗಿ ಅಲ್ಲಿಂದ ತಿರುಗಿ ವಾಪಾಸ್ ಅದೇ ದಾರಿಯಾಗಿ ಬಂದು ಅರ್ಕುಳ ನೇತ್ರಾವತಿ ನದಿಯಲ್ಲಿ
ಜಲಸ್ತಂಭನಗೊಳಿಸಲಾಯಿತು.
ಭಜನೆ,ಶಂಖ,ಜಾಗಟೆ,ಸ್ಯಾಕ್ಸೋಫೋನ್,ಬ್ಯಾಂಡ್,ಚಂಡೆ,ಕೊಂಬು,ಕೀಲು ಕುದುರೆ,ಗೊಂಬೆಕುಣಿತ ವಿವಿಧ ಸಂಘ ಸಂಸ್ಥೆಗಳ ಟ್ಯಾಬ್ಲೋ,ಸ್ತಬ್ದಚಿತ್ರಗಳು ಶೋಭಾಯಾತ್ರೆಗೆ ವಿಶೇಷ ಮೆರಗುನೀಡಿತು.ರಸ್ತೆಯುದ್ದಕ್ಕು ಸಾವಿರಾರು ಭಕ್ತರು ನಿಂತು ಶ್ರೀಗಣೇಶನ ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು.