ಕಾವೇರಿ ವಿವಾದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

Coastal Bulletin
ಕಾವೇರಿ ವಿವಾದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಹಿನ್ನಡೆ

ಬೆಂಗಳೂರು: ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದ್ದು, ಜಲಾಶಯಗಳು ಖಾಲಿ ಆಗಿದ್ದರೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿಗಳು ತಮಿಳುನಾಡಿಗೆ ತಲಾ 5,000 ಕ್ಯೂಸೆಕ್‌ ನೀರು ಬಿಡಲು ಆದೇಶ ಹೊರಡಿಸಿದ್ದವು. ಆದರೆ, ಕಾವೇರಿ ಪ್ರಾಧಿಕಾರ ಮತ್ತು ಸಮಿತಿಗಳ ಮುಂದೆ ಸರಿಯಾಗಿ ವಾದ ಮಂಡಿಸದೇ ಸುಪ್ರೀಂ ಕೋರ್ಟ್‌ಗೆ ಕಾವೇರಿಯನ್ನು ಅಡಮಾನ ಇಟ್ಟ ಕರ್ನಾಟಕ ಸೋತು ಬಂದಿದೆ.

ಕಾವೇರಿ ನೀರು ನಿಯಂತ್ರಣ ಸಮಿತಿ (CWRC) 6400 ಕ್ಯೂಸೆಕ್ ನೀರು ಬಿಡಬೇಕು ಎಂಬ ಬಗ್ಗೆ ಅಭಿಪ್ರಾಯ ಪಟ್ಟಿತ್ತು. ಆದರೆ ಶಿಫಾರಸಿನಲ್ಲಿ ಕೇವಲ 5,000ಕ್ಕೆ ನಿಗದಿ ಮಾಡಿದ್ದು ಏಕೆ? ಈ ಮೊದಲು ತಮಿಳುನಾಡಿಗೆ 7,200 ಕ್ಯೂಸೆಕ್ಸ್‌ ನೀರು ಹರಿಸಲು ಆದೇಶ ನೀಡಿರುವ ಹೇಳಿದ ಮೇಲೆ ಅದನ್ನು ತಗ್ಗಿಸುವುದಾದರೂ ಹೇಗೆ? ತಮಿಳುನಾಡಿನಲ್ಲಿ ನಮಗೆ ತುಂಬಾ ಕಡಿಮೆ ನೀರು ಸಿಗುತ್ತಿದೆ. ನೀರಿನ ಸಮಸ್ಯೆ ಎರಡು ರಾಜ್ಯದಲ್ಲಿ ಇದೆ. ಆದರೆ ನಮಗೆ ಸಿಗುತ್ತಿರುವುದು ತುಂಬಾ ಕಡಿಮೆಯಾಗಿದೆ ಎಂದು ತಮಿಳುನಾಡು ಪರ ವಕೀಲ ಮುಕುಲ್‌ ರೋಹ್ಟಗಿ ವಾದ ಮಂಡಿಸಿದರು.

ಈವರೆಗೆ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣಾ ಸಮಿತಿಯ ಎಲ್ಲಾ ಅದೇಶಗಳನ್ನು ಪಾಲಿಸಿದ್ದೇವೆ. ಇನ್ನು ತಮಿಳುನಾಡು ಬೆಳೆಗಳನ್ನು ಬೆಳೆಯುವುದಕ್ಕೆ ನೀರಾವರಿ ಆದ್ಯತೆಗಾಗಿ ನೀರನ್ನು ಕೇಳುತ್ತಿದೆ. ಆದರೆ, ಕರ್ನಾಟಕದಲ್ಲಿ ಕುಡಿಯುವ ನೀರಿನ ಬಗ್ಗೆ ಚಿಂತಿತರಾಗಿದ್ದೇವೆ. ಹಿಂಗಾರು ಮಳೆ ನಮಗೆ ಇನ್ನೂ ಬರಬೇಕಿದೆ. ಸೌತ್ ವೆಸ್ಟ್ ಮಾನ್ಸೂನ್ ವಿಫಲ ಆಗಿದ್ದರೆ, ಈಶಾನ್ಯ ಮಳೆಯು ಕಡಿಮೆ ಇರುವ ಸಾಧ್ಯತೆಯಿದೆ ಎಂದು ಕರ್ನಾಟಕ ಪರ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು. ಇನ್ನು ಮಂಡ್ಯದ ರೈತರು ಸಲ್ಲಿಕೆ ಮಾಡಿದ ಅರ್ಜಿಗಳ ವಿಚಾರಣೆಯನ್ನೇ ಮಾಡದ ನ್ಯಾಯಪೀಠ ನೇರವಾಗಿ ಆದೇಶವನ್ನು ಬರೆಸಲು ಮುಂದಾಯಿತು.

 ಸಂಕಷ್ಟ ಸೂತ್ರ, ರೈತರ ವಾದವನ್ನೇ ಆಲಿಸದೇ ಆದೇಶ ಕೊಟ್ಟ ಕೋರ್ಟ್‌: ಇನ್ನು ಆದೇಶ ಹೊರಡಿಸುವ ವೇಳೆ ಕರ್ನಾಟಕದಿಂದ ಮೇಕೆದಾಟು ಜಲಾಶಯ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಿತು. ನಂತರ ವಕೀಲ ದುಷ್ಯಂತ ದವೇ ಅವರು ಕರ್ನಾಟಕದಲ್ಲಿ ಮಳೆ ಕೊರತೆಯಿದ್ದು, ಸಂಕಷ್ಟ ಸೂತ್ರದ ಅಗತ್ಯದ ಬಗ್ಗೆ ಪ್ರಸ್ತಾಪಿಸಿದರು. ಜೊತೆಗೆ, ರೈತರ ಪರವಾಗಿ ವಾದವನ್ನು ಮಂಡಿಸಲು ಮುಂದಾದರಾದರೂ, ಇದನ್ನ ನೋಡಲು ತಜ್ಞರ ಸಮಿತಿ ಇದೆಯಲ್ಲ ಎಂದು ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ತಿಳಿಸಿ ವಾದ ಮಂಡನೆಯನ್ನು ನಿಲ್ಲಿಸುವಂತೆ ತಿಳಿಸಿದರು. ನಂತರ, ಕರ್ನಾಟಕದ ಪರವಾಗಿ ಸದ್ಯ ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಲು ತಜ್ಞರು ಬರಬೇಕು ಎಂದ ವಕೀಲ ಮೋಹನ್ ಕಾತರಕಿ ಹೇಳಿದರಾದರೂ ಈ ಬಗ್ಗೆ ಗಮ ಹರಿಸದ ನ್ಯಾಯಪೀಠ ಮುಂದಿನ ವಿಚಾರಣೆಯನ್ನು 15 ದಿನಗಳವರೆಗೆ ಮುಂದೂಡಿಕೆ ಮಾಡಿತು.

Leave a Comment