ನಾಯಿಲ: ಉಚಿತ ನೇತ್ರ ತಪಾಸಣಾ, ಚಿಕಿತ್ಸಾ ಹಾಗೂ ರಕ್ತದಾನ ಶಿಬಿರ ಉದ್ಘಾಟನೆ.

Coastal Bulletin
ನಾಯಿಲ: ಉಚಿತ ನೇತ್ರ ತಪಾಸಣಾ, ಚಿಕಿತ್ಸಾ ಹಾಗೂ ರಕ್ತದಾನ ಶಿಬಿರ ಉದ್ಘಾಟನೆ.

ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗ ನಾಯಿಲ ವತಿಯಿಂದ ಮಂಗಳಾದೇವಿ ಲಯನ್ಸ್ ಕ್ಲಬ್ ಸಹಿತ ಬಿ.ಸಿ.ರೋಡು ಸಿಟಿ ಮತ್ತು ಲೊರೆಟ್ಟೊಹಿಲ್ಸ್ ಹಾಗೂ ಮೊಡಂಕಾಪು ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಭಾನುವಾರ ಏರ್ಪಡಿಸಿದ್ದ 'ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಹಾಗೂ ರಕ್ತದಾನ ಶಿಬಿರ, ಹಾಗೂ ಅಂಚೆ ಇಲಾಖೆಯ ಇನ್ಶೂರೆನ್ಸ್ ಮಾಹಿತಿ ಕಾರ್ಯಕ್ರಮವನ್ನು ಹಿರಿಯ ವೈದ್ಯ ಡಾ.ಸುಬ್ರಹ್ಮಣ್ಯ ಟಿ.ಉದ್ಘಾಟಿಸಿದರು.

ಅಂಚೆ ಜೀವ ವಿಮೆ ಬಗ್ಗೆ ಗುರುಪ್ರಸಾದ್ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ದಿನೇಶ ನೆಲ್ಲಿಗುಡ್ಡೆ, ಪ್ರಮುಖರಾದ ಸಂತೋಷ್ ಪೂಂಜ, ಕೆ.ಪದ್ಮನಾಭ

ರೈ, ವಿಜಯ ಫೆರ್ನಾಂಡಿಸ್, ಇಲ್ಯಾಸ್ ಸ್ಯಾಂಕ್ಟಿಸ್, ಸತೀಶ್ ಕುಮಾರ್, ದಿವಾಕರ ಶೆಟ್ಟಿ, ಉಮೇಶ ಪೂಜಾರಿ, ಕಿರಣ್ ಅಟ್ಲೂರ್ ಮತ್ತಿತರರು ಇದ್ದರು.

Leave a Comment