ದೇಹ ಮತ್ತು ಮನಸ್ಸು ಎರಡನ್ನು ಜೋಡಿಸುವ ಮತ್ತು ನಮ್ಮ ಜೀವನಶೈಲಿಯ ಮೂಲಕ ಆರೋಗ್ಯಕರ ಜೀವನಕ್ಕೆ ಯೋಗ ಮತ್ತು ಯೋಗಾಸನಗಳ ಅಭ್ಯಾಸ ಅಗತ್ಯ ಎಂದು ಪತಂಜಲಿ ಯೋಗ ಸಮಿತಿಯ ಜೇಸಿ ರಮ್ಯ ವಿನಾಯಕ್ ಹೇಳಿದರು.
ಅವರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ಜೇಸಿಐ ಜೋಡುಮಾರ್ಗ ನೇತ್ರಾವತಿ ಸಹಕಾರದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಯ ಸಂಪನ್ಮೂಲ ವ್ಯಕಿಯಾಗಿ ಮಾತನಾಡಿದರು.
ಉದ್ಯಮಿ, ಕಾರ್ಯಕ್ರಮ ನಿರೂಪಕ ಯತೀಶ್ ಶಂಭೂರು ಕಾರ್ಯಕ್ರಮ ಉದ್ಘಾಟಿಸಿ ನಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಯೋಗ ಅತ್ಯಂತ ಉತ್ತಮ ಕ್ರಿಯೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ್, ಜೇಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷರಾದ ಹರಿ ಪ್ರಸಾದ್ ಕುಲಾಲ್, ಎಸ್ಸ ಡಿ ಎಂ ಸಿ ಸದಸ್ಯರಾದ ಜಿನ್ನಪ್ಪ, ಸೌಮ್ಯ, ನಿವೃತ್ತ ಶಿಕ್ಷಕ ಶಂಕರ್ ವಿ, ಶಿಕ್ಷಕರಾದ ವಸಂತಿ, ಭಾರತಿ, ವರಮಹಾಲಕ್ಷ್ಮೀ, ಪ್ರಕಾಶ್, ಸುಜಾತ, ಮಂಜುಶ್ರೀ, ಶ್ರುತಿ ಉಪಸ್ಥಿತರಿದ್ದರು.
ರಮ್ಯ ವಿನಾಯಕ್ ಮತ್ತು ನಿವೃತ್ತ ಶಿಕ್ಷಕ ಶಂಕರ್ ವಿ. ಯೋಗಾಸನ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ವಿದ್ಯಾರ್ಥಿ ನಾಯಕ ಕಾರ್ತಿಕ್ ವಂದಿಸಿದರು. ಮಧುಶ್ರೀ ಮತ್ತು ಪ್ರತೀಕ್ ಕಾರ್ಯಕ್ರಮ ನಿರ್ವಹಿಸಿದರು.