ಬಂಟ್ವಾಳ :ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಉಪ್ಪಿನಂಗಡಿ ಶಾಖೆಯ ಅಮೂಲ್ಯ ಸ್ವಸಹಾಯ ಸಂಘಗಳ ಸದಸ್ಯರ ಸಮ್ಮಿಲನ ಕಾರ್ಯಕ್ರಮವು ಜೂ 20ರಂದು ಉಪ್ಪಿನಂಗಡಿ ಶಾಖಾ ವಠಾರದಲ್ಲಿ ಜರಗಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್ ವಹಿಸಿದ್ದರು. ಉಪಾಧ್ಯಕ್ಷ ಜನಾರ್ಧನ ಬೊಂಡಾಲ ಉಪಸ್ಥಿತರಿದ್ದರು. ಸಂಘದ ಪ್ರಧಾನ ವ್ಯವಸ್ಥಾಪಕ ಭೋಜ ಮೂಲ್ಯಸಂಘದ ಬೆಳವಣಿಗೆಯಲ್ಲಿ ಸ್ವ ಸಹಾಯ ಸಂಘಗಳ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕೈಲಾರು ರಾಜಗೋಪಾಲ್ ಭಟ್, ಅಮೂಲ್ಯ ಗ್ಯಾಸ್ ಏಜೆನ್ಸಿ ಮಾಲಕರಾದ ಚಂದಪ್ಪ ಎಂ, , ಜೆ ಸಿ ಐ ಉಪ್ಪಿನಂಗಡಿಯ ನಿಕಟಪೂರ್ವ ಅಧ್ಯಕ್ಷರಾದ ವಿಶ್ವನಾಥ್ ಕುಲಾಲ್ ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ
ಹಾರೈಸಿದರು.
ಸಹಕಾರಿಯ ನಿರ್ದೇಶಕರಾದ ಸತೀಶ್ ಪಲ್ಲಮಜಲು, ರಮೇಶ್ ಬಿ ಸಾಲ್ಯಾನ್, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಂ ಕೆ ,ಮಾರಾಟ ಅಧಿಕಾರಿ ಉದಯ ಹಾಜರಿದ್ದರು.
ಶಾಖಾ ವ್ಯವಸ್ಥಾಪಕ ಮತ್ತು ಸ್ವಸಹಾಯ ಸಂಘಗಳ ಮೇಲ್ವಿಚಾರಕರಾದ ಶಿವರಾಮ್ ಮರ್ತಾಜೆ ರವರು ಪ್ರಸ್ತಾಪಿಸಿ ಗಣ್ಯರನ್ನು ಸ್ವಾಗತಿಸಿದರು, ಮೇಲ್ವಿಚಾರಕರಾದ ದುರ್ಗಾ ಪ್ರಸಾದ್ ಪಿ.ಕೆ. ವಂದಿಸಿ, ಸಿಬ್ಬಂದಿಯಾದ ವೆಂಕಟೇಶ್ ಕೃಷ್ಣಾಪುರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ವಾವಲಂಬನೆಗೆ ಪ್ರೇರಣೆಯಾಗಿ ಮಲ್ಲಿಗೆ ಗಿಡಗಳನ್ನು ಸ್ವ ಸಹಾಯ ಸಂಘದ ಸದಸ್ಯರಿಗೆ ವಿತರಿಸಲಾಯಿತು.















