ಬಂಟ್ವಾಳ: ಫರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಜ.21 ರಿಂದ 26ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನಲೆ ಬಿ.ಸಿ.ರೋಡ್ ಶ್ರೀ ರಕ್ತಶ್ವರಿ ದೇವಸ್ಥಾನ ದಲ್ಲಿ ಸಮಾಲೋಚನಾ ಸಭೆ ನಡೆಯಿತು.
,ಸಂಚಾಲಕರ ಆಯ್ಕೆ
ಸಭೆಯಲ್ಲಿ ಸಂಚಾಲಕರಾಗಿ ಇಂದ್ರೇಶ್ ಬಿ.ಸಿ. ರೋಡ್, ಲೋಕನಾಥ್ ಶೆಟ್ಟಿ, ಸಂಜೀವ ಪೂಜಾರಿ ಗುರುಕೃಪಾ, ವಿಶ್ವನಾಥ್ ಬಿ.ಸಿ.ರೋಡ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯಧ್ಯಕ್ಷ ತಾರಾನಾಥ ಕೊಟ್ಟಾರಿ ಅವರು ದೇವಳದ ಬ್ರಹ್ಮಕಲಶೋತ್ಸವದ ಕುರಿತಾಗಿ ಮಾಹಿತಿ ನೀಡಿದರು.
ಈ ಸಂದರ್ಭ ಬ್ರಹ್ಮಕಲಶೋತ್ಸವ
ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಗೌರವಧ್ಯಕ್ಷ ಐತಪ್ಪ ಆಳ್ವ ಸುರ್ಜಿ ಗುತ್ತು, ಪ್ರದಾನ
ಕಾರ್ಯದರ್ಶಿ ಉಮೇಶ್ ಶೆಟ್ಟಿ ಬರ್ಕೆ, ಕೋಶಾಧಿಕಾರಿ ಉಮೇಶ್ ಬೆಂಜನಪದವು,ಸಂಚಾಲಕ ವಿಠಲ್ ಆಳ್ವ ಪ್ರಮುಖರಾದ ಗಣೇಶ್ ಸುವರ್ಣ ತುಂಬೆ, ಉದಯ ರಾಮಲ್ ಕಟ್ಟೆ ಉಪಸ್ಥಿತರಿದ್ದರು.
ಜಗನ್ನಾಥ ಚೌಟ ಮಾಣಿ, ನ್ಯಾಯವಾದಿ ಅಶ್ವನಿಕುಮಾರ್ ರೈ ಅವರು ಸಮಯೋಚಿತವಾಗಿ ಮಾತನಾಡಿದರು.
ಜ.21ರಂದು ಹೊರೆಕಾಣಿಕೆ
ಬಿ. ಮೂಡ ಗ್ರಾಮದಿಂದ ಜ.21 ರಂದು ಹೊರೆಕಾಣಿಕೆ ಸಮರ್ಪಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.














