ಬಂಟ್ವಾಳ :ಸ್ವಚ್ಛ ಭಾರತ ಪರಿಕಲ್ಪನೆಯ ಕನಸು ನನಸಾಗಳು ಸರಕಾರ ರಾಷ್ಟ್ರ ಮಟ್ಟದಲ್ಲಿ ಹಲವು ಯೋಜನೆಗಳನ್ನು, ಆದೇಶಗಳನ್ನು ಜಾರಿಗೊಳಿಸಿದರೂ ಸ್ಥಳೀಯ ಮಟ್ಟದಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಎಲ್ಲೆಂದರಲ್ಲಿ ಕಸ ತ್ಯಾಜ್ಯ ಎಸೆಯುವ ಚಾಳಿ ಮುಂದುವರಿಯುತ್ತಲೇ ಇದೆ.
ಇದೀಗ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಫರಂಗಿಪೇಟೆ-ಕುಂಪಣಮಜಲು ರಸ್ತೆಯ ಶ್ರೀ ಆಂಜನೇಯ ದೇವಸ್ಥಾನದ ಸಮೀಪದಲ್ಲೇ ರಸ್ತೆಯ ಪಕ್ಕದಲ್ಲಿ ರಾಶಿ ರಾಶಿ ಕಸ,ಕೊಳೆತ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಡಿದ ಪರಿಣಾಮ ಕೆಳಗೆ ತೋಡಿನಲ್ಲಿ ಹರಿಯುವ ನೀರಿಗೆ ಬಿದ್ದು ನೀರು ಮಲಿನವಾಗಿ ದುರ್ನತ ಬೀರಿ, ಸಾಂಕ್ರಾಮಿಕ ರೋಗ
ಹರಡುವ ಭೀತಿ ಎದುರಾಗಿದೆ. ದೇವಸ್ಥಾನಕ್ಕೆ ಬರುವ ಸಾರ್ವಜನಿಕರು ಹಾಗೂ ಪ್ರಯಾಣಿಕರು ಕೆಟ್ಟ ವಾಸನೆಯಿಂದ ಮೂಗು ಮುಚ್ಚುವಂತಾಗಿದೆ. ಸಂಬಂಧಪಟ್ಟವರು ಶೀಘ್ರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಎಲ್ಲಿಯವರೆಗೆ ನಿಯಮ ಮೀರಿ ರಸ್ತೆ ಬದಿಯಲ್ಲಿ ಕಸ ಎಸೆಯುವದು ನಿಲ್ಲುದಿಲ್ಲವೋ ಅಲ್ಲಿಯವರೆಗೆ ಸ್ವಚ್ಛ ಭಾರತ ಕೇವಲ ಆದೇಶವಾಗಿ ಉಳಿಯುತ್ತದೆ.
















