ಬಂಟ್ವಾಳ : ಸರ್ವಜ್ಞರ ವಚನಗಳು ಸಾರ್ವಕಾಲಿಕ ಸತ್ಯವಾಗಿದ್ದು , ಅವರ ಆದರ್ಶಗಳೊಂದಿಗೆ ಬದುಕಿನಲ್ಲಿ ಮುಂದುವರೆದಾಗ ಜೀವನದಲ್ಲಿ ಸುಖ ಶಾಂತಿಯ ಜತೆಗೆ ಯಶಸ್ಸು ಕೂಡ ಪ್ರಾಪ್ತವಾಗುತ್ತದೆ, ಸಿನಿಮಾ ರೀಲ್ಸ್ ಮಾಡುವ ಬದಲು ತ್ರಿಪದಿಗಳನ್ನು ಹೇಳುವ ರೀಲ್ಸ್ ಮಾಡಿದರೆ ಪ್ರಯೋಜನಕಾರಿ, ಈ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು ಎಂದು ಬಂಟ್ವಾಳ ತಹಶೀಲ್ದಾರ್ ಡಿ. ಅರ್ಚನ ಭಟ್ ಹೇಳಿದರು.
ಅವರು ಮಂಗಳವಾರ ಬಿ.ಸಿ.ರೋಡ್ನ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಆಡಳಿತದ ವತಿಯಿಂದ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜನೆಗೊಂಡಿದ್ದ ಸರ್ವಜ್ಞ ಜಯಂತಿ ಆಚರಣೆ ಉದ್ಘಾಟಿಸಿದರು.
ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಸುರೇಶ್ಕುಮಾರ್ ನಾವೂರು ಉಪನ್ಯಾಸ ನೀಡಿ, ಕವಿ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿಳಿಸುವ ಕಾರ್ಯವನ್ನು ಮಾಡಿದ್ದಾರೆ. ಅವರಿಂದ ಈ ಸಾವಿರಕ್ಕಿಂತಲೂ ಅಧಿಕ ತ್ರಿಪದಿಗಳು ರಚನೆಯಾಗಿದ್ದು, ಸಾರ್ವಕಾಲಿಕ ಸತ್ಯವನ್ನು ತಿಳಿಸುತ್ತದೆ ಎಂದರು.
ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ರಾಜ್ಯ ಕುಲಾಲ ಕುಂಬಾರರ
ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಮಹಾಬಲ, ಯುವ ವೇದಿಕೆಯ ಅಧ್ಯಕ್ಷ ನಿತೀಶ್ ಪಲ್ಲಿಕಂಡ, ಯುವ ವೇದಿಕೆ ಮಹಿಳಾ ಸಮಿತಿ ಅಧ್ಯಕ್ಷೆ ವಿಜಯ ಶ್ರೀ, ತಾಲೂಕು ಆರೋಗ್ಯಾಧಿಕಾರಿ ಡಾ| ಅಶೋಕ್ ರೈ ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ| ಪುಷ್ಪಲತಾ, ಪ್ರಮುಖರಾದ ಎಚ್ ನಯನಾಡು, ದೇವಪ್ಪಕುಲಾಲ್ ಪಂಜಿಕಲ್ಲು ಲಕ್ಷ್ಮಣ್ ಅಗ್ರಬೈಲು, ವಿಟ್ಠಲ ಪಲ್ಲಿಕಂಡ, ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು, ಉಪತಹಶೀಲ್ದಾರ್ ದಿವಾಕರ ಮುಗುಳ್ಯ, ಕಂದಾಯ ನಿರೀಕ್ಷಕರಾದ ವಿಜಯ ಆರ್. ಜನಾರ್ದನ ಜೆ. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಉಪಸ್ಥಿತರಿದ್ದರು.
ತಾಲೂಕು ಕಚೇರಿ ಸಿಬಂದಿ ಶ್ರೀಕಲಾ ಕಾರಂತ ವಂದಿಸಿದರು. ಉಪತಹಶೀಲ್ದಾರ್ ನವೀನ್ ಬೆಂಜನಪದವು ನಿರ್ವಹಿಸಿದರು.









