ಕಲ್ಲಡ್ಕ: ಶ್ರೀರಾಮ ವಿದ್ಯಾಲಯದಲ್ಲಿ ಎಚ್ಐವಿ ಜಾಗೃತಿ ಹಾಗೂ ಕ್ಷಯ ರೋಗದ ಮಾಹಿತಿ ಕಾರ್ಯಕ್ರಮ.

Coastal Bulletin
ಕಲ್ಲಡ್ಕ: ಶ್ರೀರಾಮ ವಿದ್ಯಾಲಯದಲ್ಲಿ ಎಚ್ಐವಿ ಜಾಗೃತಿ ಹಾಗೂ ಕ್ಷಯ ರೋಗದ ಮಾಹಿತಿ ಕಾರ್ಯಕ್ರಮ.

ಬಂಟ್ವಾಳ :ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇದರ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೆಡ್‌ ರಿಬ್ಬನ್ ಕ್ಲಬ್ಬಿನ ವತಿಯಿಂದ ಎಚ್ಐವಿ /ಏಡ್ಸ್ ನ ಜಾಗೃತಿ ಹಾಗೂ ಕ್ಷಯ ರೋಗದ ಬಗ್ಗೆ ಮಾಹಿತಿ ಕಾರ್ಯಕ್ರಮ ಇಂದು ಪ್ರೇರಣಾ ಸಭಾಭವನದಲ್ಲಿ ನಡೆಯಿತು.

ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿರುವ ಡಾ| ರೋಶನಿ ಪೂಂಜ ಏಡ್ಸ್ ರೋಗದ ವಿವಿಧ ಆಯಾಮಗಳನ್ನು ತಿಳಿಸಿಕೊಡುತ್ತಾ ಏಡ್ಸ್ ರೋಗ ಬರಬಹುದಾದ ವಿವಿಧ ಬಗೆಗಳನ್ನು ವಿವರಿಸಿದರು .ಜೊತೆಗೆ ಕ್ಷಯ ರೋಗದ ವಿವಿಧ ಲಕ್ಷಣಗಳನ್ನು ತಿಳಿಸುತ್ತಾ ರೋಗವನ್ನು ಗುಣಪಡಿಸುವ ಉಪಾಯಗಳನ್ನ ತಿಳಿಹೇಳಿದರು .ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಾ ವಿದ್ಯಾರ್ಥಿಗಳಿಗಾಗಿ ಪ್ರತಿ ವಾರ ನಡೆಸುವ ರಸಪ್ರಶ್ನೆಯ ವಿಜೇತರನ್ನು ಗುರುತಿಸಿ ನಗದು ಬಹುಮಾನ

ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಪದವಿ ವಿಭಾಗದ ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ವಹಿಸಿದ್ದರು. ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಯತಿರಾಜ್ ಪಿ. ಮತ್ತು ಸಹ ಯೋಜನಾಧಿಕಾರಿ ದೀಕ್ಷಿತಾ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕಿಯಾದ ದ್ವಿತೀಯ ಕಲಾವಿಭಾಗದ ಪದ್ಮಶ್ರೀ ಇವರು ಪ್ರಾರ್ಥನೆಯನ್ನು ಹಾಡಿದರು .ಪ್ರಥಮ ವರ್ಷದ ಮಂಜುನಾಥ್ ಸ್ವಾಗತಿಸಿ, ಭೂಮಿಕ ವಂದಿಸಿ, ಧನುಶ್ರಿ ಕಾರ್ಯಕ್ರಮ ನಿರೂಪಿಸಿದರು.

Leave a Comment