ಬಂಟ್ವಾಳ :ಡಿ19ರಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ - 2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ" ಜಲ್ ಜೀವನ್ ಮಿಷನ್ " ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೀರಿನ ಗುಣಮಟ್ಟ ಪರೀಕ್ಷಾ ತರಭೇತಿಯ ಜೊತೆಗೆ ಶುದ್ದ ಜಲದಿಂದ ಸುರಕ್ಷತೆ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ತರಭೇತಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ವಿದ್ಯಾರ್ಥಿಗಳು ಸೇರಿ 72 ಜನರು ಭಾಗವಹಿಸಿದ್ದರು. ಅನುಷ್ಠಾನ ಬೆಂಬಲ ಸಂಸ್ಥೆಯ ವಿಲ್ಮಾ ಮತ್ತು ಚಂದ್ರಶೇಖರ್ ರವರು ನೀರಿನ ಗುಣಮಟ್ಟ ಪರೀಕ್ಷಾ ತರಭೇತಿಯ ತರಭೇತಿಯನ್ನು ನಡೆಸಿಕೊಟ್ಟರು.
ಅನುಷ್ಠಾನ
ಬೆಂಬಲ ಸಂಸ್ಥೆಯ ಗುಣವತಿಯವರು ನೀರಿನ ಮಹತ್ವ ಮತ್ತು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ನ ಬಂಟ್ವಾಳ ತಾಲೂಕಿನ ಸಮುದಾಯ ಸಂಘಟಕಿಯಾದ ವಿಲ್ಮಾರವರು ಆಯೋಜಿಸಿ ಯಶಸ್ವಿಗೊಳಿಸಿದರು














