Coastal Bulletin

ಮಂಗಳೂರು :ಉಳಾಯಿಬೆಟ್ಟು ಗ್ರಾಮದ ಪೆರ್ಮಂಕಿಯಲ್ಲಿ ಪ್ರೀತಿ ಗೇಮ್ಸ್ ಕ್ಲಬ್ (ರಿ) ಹಾಗೂ ಊರಿನ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪೆರ್ಮಂಕಿ ಕ್ರೀಡೋತ್ಸವ-2022 ಡಿ 18ರಂದುಭಾನುವಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಕೇಶ್ ಶೆಟ್ಟಿ ನಡಿಗುತ್ತು ನೆರೆವೇರಿಸಿ ಮಾತನಾಡಿ, ಸಂಘದ ಸೇವಾ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು .

ಈ ಸಂದರ್ಭದಲ್ಲಿ ರವಿರಾಜ್ ರಾವ್, ರತ್ನ ಸುರೇಶ್, ದಿನೇಶ್ ಪೆರ್ಮಂಕಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿತಾ ವಿ. ಕ್ಯಾಥರಿನ್, ಪ್ರಶಾಂತ್ ಸಲ್ದಾನ, ಎಚ್. ಪ್ರಸಾದ್ ಪಂಡಿತ್, ಕಿರಣ್ ಪಕ್ಕಳ, ಶ್ರೀಧರ ಪೂಜಾರಿ ಬೇಟೆಮಾರು, ಜಯಲಕ್ಷ್ಮಿ,

ಸಂಜೀವ, ರುಕ್ಮಯ ಪೂಜಾರಿ, ದಾಮೋದರ, ಶ್ರೀಧರ್ ಪಿ, ನಿತಿನ್ ಉಪಸ್ಥಿತರಿದ್ದರು.

ಪರಿಸರದ ಸುಮಾರು 200ಕ್ಕೊ ಅಧಿಕ ಮಂದಿ ಉತ್ಸಾಹದಿಂದ ಕ್ರೀಡೋತ್ಸವ ಪಾಲ್ಗೊಂಡರು, ಮಕ್ಕಳಿಗೆ ವಿಶೇಷ ಪ್ರತಿಭಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ತೀರ್ಪುಗಾರರಾಗಿ ಕೀರ್ತಿ ನರೇಶ್, ಭಾಸ್ಕರ್ ಸುವರ್ಣ, ನಿರಂಜನ್ ಶೆಟ್ಟಿ, ಸುನಿಲ್ ಕುಮಾರ್, ಜಿತೇಶ್, ಯಶಶ್ರೀ, ಲಕ್ಷ್ಮಿ ಇವರು ಕಾರ್ಯನಿರ್ವಹಿಸಿದರು. ಎಲ್ಲಾ ಸಂಘ-ಸಂಸ್ಥೆಗಳ ಸದಸ್ಯರುಗಳು ಕ್ರೀಡಾಕೂಟ ಯಶಸ್ವಿಗಾಗಿ ಸಹಕರಿಸಿದರು. ಶ್ರೀನಾಥ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು.

Leave a Comment