ಬಂಟ್ವಾಳ : ಮಂಗಳೂರಿನ ಲೇಡಿಹಿಲ್‌ನಲ್ಲಿ ಅ.18ರಂದು ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಐವರಿಗೆ ಕಾರು ಢಿಕ್ಕಿಯಾಗಿ ರೂಪಶ್ರೀ ಎನ್ನುವ ಹೆಣ್ಣು ಮಗಳು ಸಾವನಪ್ಪಿದ್ದು ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು, ಮೃತ ರೂಪಶ್ರೀ ಅವರ ಕುಟುಂಬಕ್ಕೆ ಸರಕಾರ ಗರಿಷ್ಠ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ನ.19ರಂದು ರವಿವಾರ ಬೋಂದೆಲ್‌ನ ಸರ್ವಜ್ಞ ವೃತ್ತದ ಬಳಿ ಪ್ರತಿಭಟನೆ ಜರಗಿತು.
ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಗಂಗಾಧರ ಬಂಜನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಘಟನೆಯ ಬಗ್ಗೆ ಪೊಲೀಸರು ಸರಿಯಾದ ತನಿಖೆ ನಡೆಸಿಲ್ಲ.ಸರಕಾರ ಯಾವುದೇ ಪರಿಹಾರ ಕೂಡ ನೀಡಿಲ್ಲ. ಮಗಳನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದ್ದು ಅವರಿಗೆ ನ್ಯಾಯ ಒದಗಿಸಬೇಕು ಎಂದರು.
ವೇದಿಕೆಯ ರಾಜ್ಯ ಸಂಘಟನ ಕಾರ್ಯದರ್ಶಿ ಅನಿಲ್ ದಾಸ್ ಮಾತನಾಡಿ, ಬಡ ಕುಟುಂಬದ ಹೆಣ್ಣಿನ ಸಾವಿಗೆ ನ್ಯಾಯ ನೀಡಲು ಸರಕಾರ ವಿಫಲವಾಗಿದೆ. ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪಾದಚಾರಿಗಳ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಹಣತೆ ಹಿಡಿದು
ಮೌನ ಪ್ರತಿಭಟನೆ ನಡೆಸಲಾಯಿತು. ರೂಪಶ್ರೀ ಹೆಸರಿನಲ್ಲಿ ಪಾದಚಾರಿಗಳ ಸುರಕ್ಷಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ| ಎಂ. ಅಣ್ಣಯ್ಯ ಕುಲಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಯೇಶ್ ಗೋವಿಂದ್, ಮಹಾನಗರ ಪಾಲಿಕೆ ಸದಸ್ಯ ಲೋಕೇಶ್ ಬೊಳ್ಳಾಜೆ, ಮಮತಾ ಹೊನ್ನಯ್ಯ ಪ್ರಮುಖರಾದ ಡಾ। ಅಣ್ಣಯ್ಯ ಕುಲಾಲ್, ಕುಲಾಲ್, ಶ್ರೀನಾಥ್ ಕುಲಾಲ್ ಕೃಷ್ಣಾಪುರ, ಸುಕುಮಾರ್ ಬಂಟ್ವಾಳ, ನಿತೇಶ್, ಶ್ರೀಕಾಂತ್ ಸಾಲ್ಯಾನ್, ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೆಬಲ್ ಟ್ರಸ್ಟ್ ಹಿಂದೂ ಮಹಾಸಭಾ ಕರ್ನಾಟಕ, ನೇತ್ರಾವತಿ, ಗುರುಪುರ ಸಮುದ್ರ ತಟ ರಕ್ಷಣಾ ವೇದಿಕೆ ಮಂಗಳೂರು ಮೊದಲಾದ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು














