ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ. ಬದ್ಧತೆ ಮತ್ತು ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ಡಿ.ವಾಸುದೇವ ಕಾಮತ್

Coastal Bulletin
ಬೆಂಜನಪದವು :ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪ್ರದಾನ ಸಮಾರಂಭ. ಬದ್ಧತೆ ಮತ್ತು ಸತತ ಪರಿಶ್ರಮದಿಂದ ಸಾಧನೆ ಸಾಧ್ಯ: ಡಿ.ವಾಸುದೇವ ಕಾಮತ್

ಬಂಟ್ವಾಳ :ವಿದ್ಯಾರ್ಥಿಗಳು ಬದ್ಧತೆಯಿಂದ ಸತತ ಪರಿಶ್ರಮಪಟ್ಟರೆ ಸಾಧನೆ ಮಾಡಲು ಸಾಧ್ಯವಿದ್ದು,ಜ್ಞಾನ ಮತ್ತು ಪ್ರತಿಭೆ ಕದಿಯಲಾಗದ ಸಂಪತ್ತು ಎಂದು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಆಡಳಿತ ಮಂಡಳಿ ಅಧ್ಯಕ್ಷ ಡಿ.ವಾಸುದೇವ ಕಾಮತ್ ಹೇಳಿದರು.

ಅವರು ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಶನಿವಾರ ಜರಗಿದ 19ನೇ ಬ್ಯಾಚಿನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅಧ್ಯಕ್ಷತೆವಹಿಸಿ ಮಾತನಾಡಿ ಮಾತನಾಡಿದರು

ಕೆನರಾ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಕೌನ್ಸಿಲ್ ಸಂಚಾಲಕ,ಉದ್ಯಮಿ,ಹಾಂಗ್ಯೋ ಐಸ್ಕ್ರೀಂನ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ ಮಾತನಾಡಿ, ಸಮಾಜದಲ್ಲಿರುವ ಸವಾಲನ್ನು ವೈವಿಧ್ಯತೆಯ ಸೃಜನಶಿಲತೆಯಿರುವ ವಿದ್ಯಾರ್ಥಿಗಳು ವಿಶ್ವಾಸದಿಂದ ಎದುರಿಸಬೇಕು.ಶಿಕ್ಷಣದಿಂದ ಪಡೆದ ಜ್ಞಾನ,ಕೌಶಲ ಸದ್ಬಳಕೆಯಿಂದ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಬೇಕು ಎಂದು ಹೇಳಿದರು.

 ಕಾಲೇಜಿನ ಸಂಚಾಲಕ, ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಮಾತನಾಡಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸೃಜನಶೀಲತೆಯಿದೆ. ತಾತ್ಕಾಲಿಕ ಹಿನ್ನಡೆಗಳು ಯಶಸ್ಸಿಗೆ ಮುನ್ನುಡಿಯಾಗಿದ್ದು ತಾರ್ಕಿಕ ಚಿಂತನೆ,ಕೌಶಲಗಳಿಂದ ಸಮಸ್ಯೆಗಳನ್ನು ಎದುರಿಸಿ ಯಶಸ್ಸು ಕಾಣಬೇಕು ಎಂದರು.

ಕಾಲೇಜಿನ ಉಪ ಪ್ರಾಂಶುಪಾಲ, ಅಕಾಡೆಮಿಕ್ ಡೀನ್ ಡಾ. ಡೇಮಿಯನ್ ಎ. ಡಿಮೆಲ್ಲೋ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿಗಳಾದ ಕೇದಾರ್ ಸಿ.ಪೈ, ಶ್ರೀಹರಿ ಭಟ್, ದೇವಿ ಪ್ರಸಾದ್,

ಆದಿತ್ಯ ಪೈ ಅನಿಸಿಕೆ ವ್ಯಕ್ತಪಡಿಸಿದರು. ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಾಲೇಜಿನ ಆಡಳಿತ ಮಂಡಳಿಯ ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ, ಸದಸ್ಯ ಬಸ್ತಿ ಪುರುಷೋತ್ತಮ ಶೆಣೈ, ಎಂ. ನರೇಶ್ ಶೆಣೈ, ಡೀನ್ ಎಕ್ರೆಡಿಟೇಶನ್ ಡಾ. ವೆಂಕಟೇಶ್ ಎನ್., ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಸುನೀಲ್ ಕುಮಾರ್ ಬಿ.ಎಲ್, ಇನ್ಫರ್ಮೇಶನ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಜಗದೀಶ್, ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ವಿಭಾಗ ಮುಖ್ಯಸ್ಥ ಡಾ. ದಯಾನಂದ್ ಜಿ.ಕೆ. ಸಮಾರಂಭದ ಮುಖ್ಯ ಸಮಸ್ವಯಕಾರರಾದ ಜಯಶ್ರೀ ಕೆ. ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ನಾಗೇಶ್ ಹೆಚ್. ಆರ್. ಸ್ವಾಗತಿಸಿದರು. ಮುಖ್ಯ ಸಮನ್ವಯಕಾರ ಅನಂತ ಕೃಷ್ಣ ಕಾಮತ್ ವಂದಿಸಿದರು. ಸಹ ಪ್ರಾಧ್ಯಾಪಕಿ ಪೂಜಾ ಕಿಣಿ ಸಾದಕ ವಿದ್ಯಾರ್ಥಿಗಳು, ಪದವಿಧರ ವಿದ್ಯಾರ್ಥಿಗಳ ವಿವರ ನೀಡಿದರು. ಕ್ಯಾರಲ್ ಡಿ.ಮೆಲ್ಲೋ ಕಾರ್ಯಕ್ರಮ ನಿರೂಪಿಸಿದರು

Leave a Comment