ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನ ಗಣಯಾಗ, ವಿಶೇಷ ಚೌತಿ ಪೂಜೆ

Coastal Bulletin
ಪಿಲಿಂಗಾಲು: ಶ್ರೀ ಗಾಯತ್ರಿ ದೇವಿ ದೇವಸ್ಥಾನ ಗಣಯಾಗ, ವಿಶೇಷ ಚೌತಿ ಪೂಜೆ

ಬಂಟ್ವಾಳ:ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ "ಲಕ್ಷ್ಮೀ ಸಹಿತ ದಶಭುಜ ಗಣಪತಿ" ದೇವರಿಗೆ ಗಣಯಾಗ ಮತ್ತು ಚೌತಿ ಪೂಜೆ ಮಂಗಳವಾರ ನಡೆಯಿತು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮಾರ್ಗದರ್ಶನ ದಲ್ಲಿ ಗಣಯಾಗ ಸಹಿತ ಚೌತಿ ಪೂಜೆ ನೆರವೇರಿತು. ಇದೇ ವೇಳೆ ಗಾಯತ್ರೀ ದೇವಿ ಮತ್ತು ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

ಪಿಲಾತಬೆಟ್ಟು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಂ.ಬೂಬ ಸಪಲ್ಯ ಮುಂಡಬೈಲು, ಸೇವಾರ್ಥಿ ಕೆ.ಬಾಬು ಸಪಲ್ಯ ವಗ್ಗ, ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರಮುಖರಾದ ಜಗದೀಶ ಕುಂದರ್ ಭಂಡಾರಿಬೆಟ್ಟು, ಜಯ ಪೂಜಾರಿ ಪಿಲಿಂಗಾಲು, ಚೇತನ್ ಪಿಲಿಂಗಾಲು, ಚಿದಾನಂದ ನಾಯ್ಕ್ ದಂಡೆ , ಅಭಿಷೇಕ್ ಪಿಲಿಂಗಾಲು, ಹರೀಶ ಪಿಲಿಂಗಾಲು, ಶಶಿಕಲಾ ಪೂಜಾರಿ, ಸುಪ್ರೀತಾ ಪೂಜಾರಿ ಮತ್ತಿತರರು ಇದ್ದರು.

Leave a Comment