ಬಂಟ್ವಾಳ :ಸಮಾಜ ಸೇವಾ ಸಂಸ್ಥೆಗಳಲ್ಲಿ ಯುವ ಜನತೆಯನ್ನು ತರಬೇತುಗೊಳಿಸಿ ಅವರನ್ನು ಸಂಪನ್ಮೂಲ ವ್ಯಕ್ತಿ ಗಳನ್ನಾಗಿ ರೂಪಿಸುವ ಮಹತ್ತರ ಕೆಲಸವನ್ನು ಜೇಸಿ ಮಾಡುತ್ತಿದೆ. ಇಲ್ಲಿ ತರಬೇತಾದ ವ್ಯಕ್ತಿಗಳು ರೋಟರಿಯಂತಹ ಸಂಸ್ಥೆಗಳಲ್ಲಿ ಯಶಸ್ವಿ ನಾಯಕರಾಗುತ್ತಾರೆ. ಜೇಸಿಐ ಜೋಡುಮಾರ್ಗ ವು ಅನೇಕ ಸಮಾಜಮುಖಿ ಕೆಲಸಗಳ ಮೂಲಕ ಈ ಪರಿಸರದಲ್ಲಿ ತನ್ನ ಛಾಪನ್ನು ಮೂಡಿಸಿದೆ ಎಂದು ಮೇಜರ್ ಡೋನರ್ ರೋ.ಮಂಜುನಾಥ ಆಚಾರ್ಯ ಹೇಳಿದರು.
ಅವರು ಜೇಸಿಐ ಜೋಡುಮಾರ್ಗ ನೇತ್ರಾವತಿ ಘಟಕವು ಲಯನ್ಸ್ ಸೇವಾ ಮಂದಿರ ಬಿ ಸಿ ರೋಡ್ ಇಲ್ಲಿ ಆಯೋಜಿಸಿದ್ದ ಜೇಸಿ ಸಪ್ತಾಹ ಜೈತ್ರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಭಾರತೀಯ ಲಲಿತಕಲೆಗಳ ಅಧ್ಯಯನ,ಅಧ್ಯಾಪನ ನಡೆಸಿರುವ ಪ್ರತಿಭಾನ್ವಿತೆ ಕುಮಾರಿ ವಸುಧಾ ಜಿ.ಎನ್. ಬೋಳಂತೂರು ಇವರಿಗೆ ಕಲಾಶ್ರೀ ಮತ್ತು ಜೇಸಿ ಸಂಸ್ಥೆಯಲ್ಲಿ ನೀಡಿದ ಸೇವೆಗಾಗಿ ಶ್ರೀನಿಧಿ ಭಟ್ ಇವರಿಗೆ ಜೇಸಿ
ಕಮಲಪತ್ರ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕಾಧ್ಯಕ್ಷೆ JFD. ಗಾಯತ್ರಿಲೋಕೇಶ್ ವಹಿಸಿದ್ದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷ ಹರಿಪ್ರಸಾದ್ ಕುಲಾಲ್, ಜೇಜೆಸಿ ಅಧ್ಯಕ್ಷೆ ರಶ್ಮಿತಾ, ಕಾರ್ಯಕ್ರಮ ನಿರ್ದೇಶಕ ಸುಬ್ರಹ್ಮಣ್ಯ ಪೈ, ಘಟಕದ ಪೂರ್ವಾಧ್ಯಕ್ಷರುಗಳು, ಜೇಸಿ ಸದಸ್ಯರು ಹಾಗು ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಮ್ಯವಿನಾಯಕ್ ವಂದಿಸಿದರು. .
ಸಪ್ತಾಹ ಅಂಗವಾಗಿ ನೃತ್ಯವೈವಿಧ್ಯ ಸ್ಪರ್ಧೆ ನಡೆಯಿತು.ರವೀಂದ್ರ ಕುಕ್ಕಾಜೆ ಸ್ಪರ್ಧೆಯನ್ನು ನಿರ್ವಹಿಸಿದರು















