ಕುಲಶೇಖರ:  ಶ್ರೀ ವೀರನಾರಾಯಣ ದೇವಸ್ಥಾನ. ಮೇ 24ರಂದು ತೃತೀಯ ವಾರ್ಷಿಕ ಪ್ರತಿಷ್ಠಾ ಮಹೋತ್ಸವ.

Coastal Bulletin
ಕುಲಶೇಖರ:  ಶ್ರೀ ವೀರನಾರಾಯಣ ದೇವಸ್ಥಾನ. ಮೇ 24ರಂದು ತೃತೀಯ ವಾರ್ಷಿಕ ಪ್ರತಿಷ್ಠಾ ಮಹೋತ್ಸವ.

ಮಂಗಳೂರು :ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಇದರ ತೃತೀಯ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಶ್ರೀ ಕ್ಷೇತ್ರದ ತಂತ್ರಿಗಳಾದ ಶ್ರೀ ಅನಂತ ಉಪಾಧ್ಯಾಯರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಶ್ರೀ ಜನಾರ್ಧನ ಭಟ್ಟರ ಉಪಸ್ಥಿತಿಯಲ್ಲಿ ಮೇ 24ರಂದು ಆದಿತ್ಯವಾರ ವಿಜೃಂಭಣೆಯಿಂದ ಜರಗಲಿರುವುದು.

ಕಾರ್ಯಕ್ರಮಗಳು:

ಅಂದು ಬೆಳಿಗ್ಗೆ ಗಂಟೆ 7.00ಕ್ಕೆ ನಿತ್ಯಪೂಜೆಪುಣ್ಯಾಹ - ಗಣಪತಿ ಹೋಮ, 25 ಕಲಶ ಅಧಿವಾಸ ಹೋಮ, ದೇವರಿಗೆ ಪಂಚಾಮೃತ ಪುರಸ್ಪರ ಕಲಶಾಭಿಷೇಕ,11ಗಂಟೆಗೆ ನಾಗದೇವರಿಗೆ ಪಂಚಾಮೃತ, ಸಾಮೂಹಿಕ ತಂಬಿಲ, ಅಶ್ಲೇಷ ಬಲಿ

ಮತ್ತು ಪರಿವಾರ ಶಕ್ತಿಗಳಿಗೆ ಪರ್ವಪೂಜೆ,ಮಧ್ಯಾಹ್ನ 12.30ಕ್ಕೆ ಮಹಾಪೂಜೆ,ಅನ್ನಸಂತರ್ಪಣೆ ಜರುಗಲಿದೆ.

ಮಧ್ಯಾಹ್ನ 2ಗಂಟೆಯಿಂದ ಭಜನಾ ಸಂಕೀರ್ತನೆ, ಸಂಜೆ 7.00ರಿಂದ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.



Leave a Comment