Coastal Bulletin

ಶಾಸಕ ರಾಜೇಶ್ ನಾಯ್ಕ್ ಅವರು ಎ.19 ರಂದು ಬುಧವಾರ ಬೆಳಿಗ್ಗೆಯಿಂದ ರಾತ್ರಿವರೆಗೆ ಬಂಟ್ವಾಳ ತಾಲೂಕಿನ ಕೊಳ್ನಾಡು, ಮಂಚಿ ಮತ್ತು ಸಾಲೆತ್ತೂರು ಗ್ರಾಮಗಳಲ್ಲಿ ಪ್ರಮುಖರ ಮನೆಗಳಿಗೆ ಹಾಗೂ ಎಸ್.ಸಿ ಕಾಲೋನಿಗಳಿಗೆ ಬೇಟಿ ನೀಡಿ ಮತಯಾಚನೆ ನಡೆಸಿದರು.

ಶಾಸಕರು ಬೇಟಿ ನೀಡಿದ ಸಂದರ್ಭದಲ್ಲಿ ಮತದಾರರಿಗೆ ಕಳೆದ ಐದು ವರ್ಷದಲ್ಲಿ ಕ್ಷೇತ್ರದಲ್ಲಿ ಮಾಡಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಮುಖ ಯೋಜನೆಗಳ ಬಗ್ಗೆ ತಿಳಿಸಿದ ಅವರು ಬಿಜೆಪಿ ನೀಡಿದ ಎಲ್ಲಾ ಭರವಸೆಗಳನ್ನು ಪೂರೈಸಿದೆ ಎಂದು ತಿಳಿಸಿದರು.

ಬಂಟ್ವಾಳ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಲ್ಲಿ ಯಾವುದೇ ಸಂಘರ್ಷವಿಲ್ಲದೆ, ಸರ್ವರಿಗೂ ಸಮಾನವಾದ ರೀತಿಯಲ್ಲಿ ನ್ಯಾಯ ಒದಗಿಸುವ ಆಡಳಿತ ನಡೆಸಿದ್ದೇನೆ.

ಮುಂದಿನ ಅವಧಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಜೊತೆ ಶಾಂತಿಯ ಬಂಟ್ವಾಳವನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಬೇಕು.

ನೀವು ನೀಡಿದ ಪ್ರತಿಯೊಂದು ಮತಕ್ಕೂ ಗೌರವ ಸಿಗುವುದರ

ಜೊತೆಗೆ , ನಿಮ್ಮ ಧ್ವನಿಯಾಗುತ್ತೇನೆ ಎಂದರು.

ಪ್ರಮುಖರಾದ ಮಾದವಮಾವೆ, ಪುಷ್ಪರಾಜ್ ಚೌಟ, ಶಿವಪ್ರಸಾದ್ ಶೆಟ್ಟಿ, ರಾಜರಾಮ್ ಹೆಗ್ಡೆ ಕುದ್ರಿಯ, ವಿಶ್ವನಾಥ ಪೂಜಾರಿ ಕಟ್ಟತ್ತಿಲ, ಅಭಿಷೇಕ್ ರೈ, ಲೋಹಿತ್ ಕೆಳಗಿನ ಅಗರಿ, ಹರೀಶ್ ಟೈಲರ್, ಪ್ರಶಾಂತ್ ಶೆಟ್ಟಿ ಅಗರಿ, ಸುಧಾಕರ ಕಾಡುಮಠ, ನಾರಾಯಣ ಶೆಟ್ಟಿ ಕುಲ್ಯಾರು, ಶಂಕರ್ ಟೈಲರ್, ಕೃಷ್ಣಪ್ರಸಾದ್ ಶೆಟ್ಟಿ,ಆನಂದ ಪೂಜಾರಿ, ನಾಗರಾಜ ಆಳ್ವ, ಪಾಪಣ್ಣ, ಗಂಗಾಧರ ಆಚಾರ್ಯ, ಮೋಹನ್ ದಾಸ್ ಹೆಗ್ಡೆ, ಪುಷ್ಪಕಾಮತ್, ವಿಜಯ ಪ್ರಭು, ಪ್ರಮೀಳಾ, ಗಣೇಶ್ ಐತಾಳ್, ಕೇಶವ ರಾವ್ ಮಂಚಿ, ಪ್ರಭಾಕರ ರೈ, ಕೃಷ್ಣಪ್ಪ. ಪುಷ್ಪರಾಜ್, ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment