ಬಂಟ್ವಾಳ :ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿ “ಪ್ರಚಲಿತ ಭಾರತ: ಸತ್ಯ- ಮಿಥೈ”ರಾಷ್ಟ್ರೀಯ ವಿಚಾರಸಂಕಿರಣವು ಫೆ. 25ರಂದು ಕಾಲೇಜಿನ ಆಜಾದ್ ಭವನದಲ್ಲಿ ನಡೆಯಲಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ತಿಳಿಸಿದರು.
ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಫೆ. 20ರಂದು ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ಪ್ರಸ್ತುತ ಸಮಾಜವು ಸತ್ಯವನ್ನು ಮರೆಮಾಚಿ ಸುಳ್ಳನ್ನೇ ಸತ್ಯವೆಂದು ಬಿಂಬಿಸಿ ಸತ್ಯವನ್ನು ಸುಳ್ಳಿನಂತೆ, ಸುಳ್ಳನ್ನು ಸತ್ಯವೆಂಬಂತೆ ತೋರಿಸಿ ಸಮಾಜವನ್ನು ಸುಳ್ಳಿನ ಸಾಮ್ರಾಜ್ಯದತ್ತ ಕರೆದೊಯ್ಯುತ್ತಿದೆ. ಸತ್ಯವನ್ನು ಮರೆಮಾಚಿರುವ ಮಿಥೈಯೆಂಬ ಪರದೆಯನ್ನು ಸರಿಸಿ. ಭ್ರಮೆಯನ್ನು ಹೋಗಲಾಡಿಸಲು, ಪ್ರಚಲಿತ ಭಾರತದಲ್ಲಿ ನಡೆಯುವ ವಿದ್ಯಮಾನಗಳ ಸತ್ಯಾಂಶದ ಜ್ಞಾನವನ್ನು ಮೂಡಿಸುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ವಿಚಾರಸಂಕಿರಣವನ್ನು ನಿವೃತ್ತ ಐ ಪಿ ಎಸ್ ಅಧಿಕಾರಿ, ಆಣ್ಣಾಮಲೈ ಕೆ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಈ ವಿಚಾರ ಸಂಕಿರಣದ ಬಗ್ಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ। ಪ್ರಭಾಕರ ಭಟ್ ಕಲ್ಲಡ್ಕ ಇವರು ವಿಚಾರ ಸಂಕಿರಣದ ಅಗತ್ಯತೆ-ಅನಿವಾರ್ಯತೆ ಬಗ್ಗೆ ಪ್ರಸ್ತಾವನೆಗೈಯಲಿದ್ದಾರೆ.
2ನೇ ಅವಧಿಯಲ್ಲಿ ಅವಧಿಯಲ್ಲಿ ಇತಿಹಾಸ ಸಂಶೋಧಕರು ಬೆಂಗಳೂರಿನ ಡಾ| ವಿಕ್ರಮ್ ಸಂಪತ್ ಕಲಿತ ಪಾಠಗಳು-ಅರಿಯದ ನೋಟಗಳು ಎಂಬ ಬಗ್ಗೆ ವಿಷಯವನ್ನು ಮಂಡಿಸಲಿದ್ದಾರೆ.
3ನೇ ಅವಧಿಯಲ್ಲಿನ್ಯಾಯವಾದಿ ಬೆಂಗಳೂರಿನ ಕ್ಷಮಾ ನರಗುಂದ ಇವರು ನರೇಟಿವ್ (ಕಥನ) ಹಾಗೆಂದರೇನು? ಎಂಬ ಬಗ್ಗೆ ವಿಷಯವನ್ನು ಮಂಡಿಸಲಿದ್ದಾರೆ. 4ನೇ ಅವಧಿಯಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ, ಇವರು ಇಸ್ರೇಲ್
ನಾವರಿಯದ ಸತ್ಯಗಳು ಎಂಬ ಬಗ್ಗೆ, ಮಂಡಿಸಲಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯಗಳ 60ಕ್ಕೂ ಹೆಚ್ಚು ಕಾಲೇಜುಗಳು ಹಾಗೂ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಅನೇಕ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದು, ಅವರಿಗೆ ವಸತಿ, ಊಟೋಪಚಾರದ ವ್ಯವಸ್ಥೆಗಳಿರುತ್ತವೆ ಎಂದು ಅವರು ತಿಳಿಸಿದರು.
ಕಳೆದ 12 ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಈ ಬಾರಿ ಇನ್ನಷ್ಟು ವ್ಯಾಪಕತೆಯನ್ನು ಪಡೆದು ಸುಮಾರು 750ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭರದ ಸಿದ್ಧತೆಯನ್ನು ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ www.srvk.org ಎಂಬ ವಿದ್ಯಾಕೇಂದ್ರದ ವೆಬ್‌ಸೈಟ್‌ನಲ್ಲಿ ಆಮಂತ್ರಣ ಹಾಗೂ ಸಂಪರ್ಕಿಸಬೇಕಾದವರ ವಿವರಗಳು ಲಭ್ಯವಿದೆ.ಕಳೆದ 11 ವರ್ಷಗಳಿಂದ ರಾಷ್ಟ್ರೀಯ ವಿಚಾರಗಳನ್ನು ಇಟ್ಟುಕೊಂಡು ವಿಚಾರಸಂಕಿರಣವನ್ನು ಆಯೋಜಿಸುತ್ತಾ ಬಂದಿದೆ ಎಂಬ ವಿಚಾರವನ್ನು ತಿಳಿಸಿದರು.
2009-10ನೇ ಶೈಕ್ಷಣಿಕ ವರ್ಷದಲ್ಲಿ ಆರಂಭಗೊಂಡ ಪದವಿ ವಿಭಾಗದ ಆರಂಭಿಕ ದಿನಗಳಿಂದಲೂ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ವಿಚಾರಸಂಕಿರಣವೊಂದನ್ನು ಆಯೋಜಿಸುತ್ತಾ ಬಂದಿದೆ. ವಿಶ್ವವಿದ್ಯಾನಿಲಯಗಳ ಎಲ್ಲಾ ಕಾಲೇಜುಗಳಲ್ಲೂ ಯುಜಿಸಿ ಪ್ರಾಯೋಜಿತ ಅನೇಕ ವಿಚಾರಸಂಕಿರಣಗಳು ನಡೆಯುತ್ತವೆಯಾದರೂ, ಅವೆಲ್ಲಕ್ಕೂ ಭಿನ್ನವಾದ ಇಂದಿನ ಅನಿವಾರ್ಯತೆಗಳನ್ನು ಪೂರೈಸುವ ವಿಚಾರಗಳನ್ನು ತಿಳಿಸುವ ವಿಚಾರಸಂಕಿರಣ ಇದಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ,ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ , ಉಪಪ್ರಾಂಶುಪಾಲ ಸುಕನ್ಯ, ಯತಿರಾಜ್ ಪೆರಾಜೆ ಉಪಸ್ಥಿತರಿದ್ದರು.














