Coastal Bulletin

ರಾಮನಗರ : ರಾಜ್ಯದಲ್ಲಿ ಐಎಎಸ್‌ ವರ್ಸಸ್‌ ಐಪಿಎಸ್‌ ಅಧಿಕಾರಿಗಳ ಜಗಳ ಜೋರಾಗಿದೆ. ಈ ವಿಚಾರದಲ್ಲಿ ಡಿ.ಕೆ.ರವಿ ತಾಯಿ ಗೌರಮ್ಮ ಪ್ರತಿಕ್ರಿಯೆ ನೀಡಿದ್ದು, ತನ್ನ ಮಗನ ಹೆಸರು ಎಳೆದು ತರುತ್ತಿರುವುದಕ್ಕೆ ಕಣ್ಣೀರಿಟ್ಟಿದ್ದಾರೆ. IPS ಅಧಿಕಾರಿ ಡಿ ರೂಪಾ, IAS ಅಧಿಕಾರಿ ರೋಹಿಣಿ ಸಿಂಧೂರಿ ಅವರೇ ನಿಮ್ಮಿಬ್ಬರ ಜಗಳದ ನಡುವೆ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ಕಣ್ಣೀರಿಟ್ಟಿದ್ದಾರೆ.

IPS ಅಧಿಕಾರಿ ಡಿ ರೂಪಾ, IAS ಅಧಿಕಾರಿ ರೋಹಿಣಿ ಸಿಂಧೂರಿ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ. ಇವರ ಇಬ್ಬರ ಜಗಳದಲ್ಲಿ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಅವರ ಹೆಸರು ಎಳೆದು ತಂದಿದ್ದು, ಈ ವಿಚಾರವಾಗಿ ಡಿ.ಕೆ.ರವಿ ತಾಯಿ ಗೌರಮ್ಮ ನಿಮ್ಮ ಗಲಾಟೆ ವಿಚಾರದಲ್ಲಿ ನನ್ನ ಮಗನ ಹೆಸರು ಎಳೆದು ತರಬೇಡಿ ಎಂದು ಹೇಳಿದ್ದಾರೆ.

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಶಾಸಕ ಸಾ.ರಾ. ಮಹೇಶ್ ಜತೆ ರಾಜಿ ಸಂಧಾಣ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕುರಿತು ಐಪಿಎಸ್‌ ಅಧಿಕಾರಿ ಹಾಗೂ ಐಜಿಪಿಯಾಗಿರುವ ಡಿ. ರೂಪಾ ಪ್ರಶ್ನೆ ಮಾಡಿದ್ದರು. ಬರೀ ಪ್ರಶ್ನೆ ಮಾತ್ರವಲ್ಲ, ರೋಹಿಣಿ

ಸಿಂಧೂರಿ ವಿರುದ್ಧ 19 ಆರೋಪಗಳನ್ನು ಮಾಡಿದ್ದು ತನ್ನ ಬಳಿ ರೋಹಿಣಿ ಮಾಡಿದ್ದ ಕಾರ್ಯಕ್ಕೆ ಸಾಕ್ಷಿಗಳು ಇವೆ. ಅಧಿಕಾರಿಯಾಗಿ ರಾಜಕಾರಣಿಗಳ ಜೊತೆಗೆ ಸಂಧಾನ ಯಾಕೆ - ಹೀಗೆ ಮುಂತಾದ ಅನೇಕ ಆರೋಪಗಳನ್ನು ಡಿ. ರೂಪಾ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಡಿದ್ದಾರೆ. 

 ಈ ಮೂಲಕ ಐಎಎಸ್ - ಐಪಿಎಸ್ ನಡುವಿನ ಜಗಳಕ್ಕೆ ನಾಂದಿ ಹಾಡಿದೆ. ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ. ರೂಪಾ ಕಿಡಿ ಕಾರಿದ್ದು,ರೋಹಿಣಿ ಅವರು ಇತರ ಅಧಿಕಾರಿಗಳಿಗೆ ತನ್ನ ಖಾಸಗಿ ಪೋಟೋಗಳನ್ನು ಶೇರ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಸದ್ಯ ಪ್ರಕರಣವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಸೂಚಿಸಿದ್ದಾರೆ

Leave a Comment