ಬಂಟ್ವಾಳ :ತಾಲೂಕಿನ ಪ್ರಕೃತಿ ರಮಣೀಯ ಪರಿಸರದಲ್ಲಿ, ಪೌರಾಣಿಕ ಹಿನ್ನಲೆಯುಳ್ಳ ಕಾರಣಿಕ ಕ್ಷೇತ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಜ್ಯೋತಿಗುಡ್ಡೆ ಯಲ್ಲಿ ವರ್ಷಾವಧಿ ಉತ್ಸವು ಫೆ.27 ರಿಂದ ಮಾ.2 ರವರೆಗೆ ಕುಡುಪು ನರಸಿಂಹ ತಂತ್ರಿಗಳ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಪ್ರತಿದಿನ ವೈದಿಕ ಕಾರ್ಯಕ್ರಮ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು ವಿವಿಧ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.
ಫೆ.27 ರಂದು ಸಂಜೆ 5 ಗಂಟೆಗೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಇರಲಿದೆ.
28 ರಂದು ರಾತ್ರಿ 7 ಗಂಟೆಯಿಂದ ವಿದುಷಿ ಶ್ರೀಮತಿ ಮಲ್ಲಿಕಾ ಜ್ಯೋತಿಗುಡ್ಡೆ ಇವರಿಂದ ನೃತ್ಯಾಂಜಲಿ ಜರಗಲಿದೆ. ರಾತ್ರಿ 9.30 ಕ್ಕೆ ಜರ್ನಿ ಥೇಟರ್ ಗ್ರೂಪ್ ಮಂಗಳೂರು
ಇವರಿಂದ ಗೋಂದೊಳು ಎಂಬ ತುಳು ಜಾನಪದ ನಾಟಕ ಇರಲಿದೆ.
ಮಾ 1 ರಂದು ರಾತ್ರಿ 7 ಗಂಟೆಯಿಂದ ಸ್ಥಳೀಯ ಅಂಗನವಾಡಿ ಪುಣಾಣಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30 ರಿಂದ ತರಿಕಿಟ ಕಲಾ ಕಮ್ಮಟ ವತಿಯಿಂದ ಎಳುವೆರ್ ದೆಯ್ಯೆರ್ ಎಂಬ ತುಳು ಯಕ್ಷಗಾನ ಬಯಲಾಟ ಇರಲಿದೆ.
ಮಾ.2 ರಂದು ರಾತ್ರಿ 8 ಗಂಟೆಗೆ ಅಣ್ಣಪ್ಪ ಸ್ವಾಮಿ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪ್ರ. ಕಾರ್ಯದರ್ಶಿ ಉದಯ ಕುಮಾರ್ ಜ್ಯೋತಿಗುಡ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














