ಕುಮ್ಡೇಲು:ಶ್ರೀ ಕೋರ್ದಬ್ಬು ದೇವಸ್ಥಾನ, ಶ್ರೀ ನಾಗಬ್ರಹ್ಮ ಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭೀಷೇಕವು ಡಿ.24 ಮತ್ತು 25 ರಂದು ನಡೆಯಲಿದೆ.
ಜ.7 ರಿಂದ 9 ರವರೆಗೆ ಶ್ರೀ ಕೋರ್ದಬ್ಬು ತನ್ನಿಮಾನಿಗೆ ಮತ್ತು ಪರಿವಾರ ದೈವಗಳಿಗೆ ವರ್ಷಾವಧಿ ನೇಮೋತ್ಸವ ಜರಗಲಿದೆ.
ಡಿ. 24 ರಂದು ಸಂಜೆ 5.30 ರಿಂದ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸಪ್ತ ಶುದ್ಧಿ ಹೀಗೆ ಹಲವು ಕಾರ್ಯಕ್ರಮಗಳು ನಡೆಯಲಿದೆ.
ಡಿ.25 ರಂದು 10.40 ಕ್ಕೆ ಶ್ರೀ ನಾಗದೇವರ ಪ್ರತಿಷ್ಠೆ ಮತ್ತು ಪ್ರತಿಷ್ಠಾ ಕಲಶಾಭಿಷೇಕ ಮಾಡಲಿದ್ದಾರೆ. ನಂತರ 11 ಗಂಟೆಯಿಂದ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗರಿಂದ ನಾಗದರ್ಶನ ನಡೆಯಲಿದೆ.
12 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. ಅಭ್ಯಾಗತರಾಗಿ ,ಬಿ.ಜೆ.ಪಿ.ಕರ್ನಾಟಕ ರಾಜ್ಯಧ್ಯಕ್ಷರು ಶ್ರೀ ನಳಿನ್ ಕುಮಾರಚ ಕಟೀಲು, ಹಿಂದುಳಿದ ಮತ್ತು ಸಮಾಜ ಕಲ್ಯಾಣ
ಸಚಿವರು ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಹೀಗೆ ಹಲವು ಗಣ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜ.7 ರಂದು 11.45 ಕ್ಕೆ ಗುಳಿಗ ದೈವಕ್ಕೆ ಗಗ್ಗರ ಸೇವೆ ನಡೆಯಲಿದೆ. ನಂತರ ರಾತ್ರಿ 11 ಗಂಟೆಯಿಂದ ಕೋರ್ದಬ್ಬು ತನ್ನಿಮಾನಿಗ ದೈವಗಳಿಗೆ ನೇಮೋತ್ಸವ ಜರಗಲಿದೆ.
ಜ.8 ರಂದು ರಾತ್ರಿ 7.30 ರಿಂದ ಕಾರ್ಣಿಕ ಕೊರಗೆಜ್ಜೆ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ 10 ಗಂಟೆಯ ಹೊತ್ತಿಗೆ ಗುಳಿಗ ಪಂಜುರ್ಲಿ ಮತ್ತು ಚಾಮುಂಡಿ ಗುಳಿಗ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














