ಬಂಟ್ವಾಳ : ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆ. ನೆತ್ತರಕೆರೆ ಇದರ ವಾರ್ಷಿಕೋತ್ಸವ ಸಮಾರಂಭವು ಡಿ.18 ಆದಿತ್ಯವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಶಾಲಾ ಮೈದಾನದಲ್ಲಿ ನಡೆಯಿತು.
ಬೆಳಿಗ್ಗೆ ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕಾಚೈತ್ಯನ್ಯಾನಂದ ಇವರು ದೀಪ ಬೆಳಗಿಸಿ, ಧ್ವಜಾರೋಹಣ ಮಾಡಿ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಸ್ತು ಬದ್ಧ ಆಕರ್ಷಕ ಕವಯತ್ತು ನಡೆಯಿತು. ತುಂಬೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಕುಮಾರ್, ನ್ಯಾಯವಾದಿ ಪಿ.ಶಿವಶಂಕರ ರಾವ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮುಂಡಾಜೆಗುತ್ತು ಜ್ಯೋತೀಂದ್ರ ಶೆಟ್ಟಿ, ಇಂಡೇನ್ ಗ್ಯಾಸ್ ಮಾಲೀಕರದ ಜಗನ್ನಾಥ ಚೌಟ, ನವೋದಯ ಮಿತ್ರ ಕಲಾ ವೃಂದ ದ ಅಧ್ಯಕ್ಷರಾದ ಸಂತೋಷ್ ಕುಮಾರ್, ಕಳ್ಳಿಗೆ ಗ್ರಾ ಪಂ ಸದಸ್ಯ ಪುರುಷೋತ್ತಮ್ ಕೊಟ್ಟಾರಿ, ಎಸ್ ಡಿ ಎಂ ಸಿ ಅಧ್ಯಕ್ಷರಾದ ದಾಮೋದರ ನೆತ್ತರಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಜೆ ನಡೆದ ವಾರ್ಷಿಕೋತ್ಸವ ಸಭಾ ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ವಹಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ, ಕಳ್ಳಿಗೆ ಗ್ರಾ ಪಂ ಅಧ್ಯಕ್ಷೆ ಯಶೋಧ ದಯಾನಂದ,ಉದ್ಯಮಿ ಐತಪ್ಪ ಆಳ್ವ ಸುಜೀರು ಗುತ್ತು,ನೇತ್ರಾವತಿ ಮಾತೃ ಮಂಡಳಿಯ ಅಧ್ಯಕ್ಷೆ ಮಾಲತಿ ಚಂದ್ರಹಾಸ, ನವೋದಯ ಮಿತ್ರ ಕಲಾ ವೃಂದ ದ ಗೌರವಧ್ಯಕ್ಷರಾದ ಸುಬ್ರಮಣ್ಯ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ,
ಉದ್ಯಮಿ, ಸಮಾಜಸೇವಕ, ಬಿಲ್ಲವ
ಮುಖಂಡ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿದ, ಬಂಟ್ವಾಳ ಕ್ಯಾಥೋಲಿಕ್ ಬ್ಯಾಂಕ್ ನ ಅಧ್ಯಕ್ಷರು,ಅಖಿಲ ಭಾರತ ಮಟ್ಟದಲ್ಲಿ ಉತ್ತಮ ಸಹಕಾರಿ ಪ್ರಶಸ್ತಿ ಪುರಸ್ಕೃತರು ಆದ ಜೀವನ್ ಲೋಯ್ಡ್ ಪಿಂಟೋ ಇವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಶಿಕ್ಷಕಿಯರಿಗೆ ಗೌರವ,
ಶಾಲೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ,ಶಾಲೆಯ ಶೈಕ್ಷಣಿಕ ಪ್ರಗತಿಗೆ ಸಹಕರಿಸಿದ ಶಿಕ್ಷಕಿಯರಾದ, ಸುಮಲತಾ, ನಿಶಾ,ಅಶ್ವಿತಾ, ಪ್ರೀತಾ ಇವರ ಕೊಡುಗೆಯನ್ನು ಸ್ಮರಿಸಿ ಅಭಿನಂದಿಸಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ,
ರಾಜ್ಯ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಶಾಲೆಯ ಗೌರವನ್ನು ಹೆಚ್ಚಿಸಿದ ವಿದ್ಯಾರ್ಥಿಗಳಾದ, ಹಂಸಿಕ, ಯಶ್ವಿನಿ, ಗೀತೆಶ್ ಇವರ ಪ್ರತಿಭೆಯನ್ನು ಗುರುತಿಸಿ ಪುರಸ್ಕಾರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕಿ ಸೆಲ್ವಿಯಾ ಬ್ರಿಗ್ಸ್ ಸ್ವಾಗತಿಸಿದರು, ಶಿಕ್ಷಕಿಯರಾದ ಅನಿತಾ ಹಾಗೂ ಚೇತನ ಬಹುಮಾನ ವಿಜೇತ ವಿದ್ಯಾರ್ಥಿಗಳ ಪಟ್ಟಿ ಓದಿದರು, ಸೆಲಿನ ಹಾಗೂ ಲಾಸ್ಯ ಸನ್ಮಾನಿತರ ಪರಿಚಯವನ್ನು ಮಾಡಿದರು, ಮೋಹಿನಿ ಹಾಗೂ ಜೇಸಿಂತ ಕಾರ್ಯಕ್ರಮ ನೀರೂಪಿಸಿದರು, ಚಾಂದಿನಿ ಹಾಗೂ ಆಶಿತಾ ಸಹಕರಿಸಿದರು.
ಬೆಳಗ್ಗೆ 10 ರಿಂದ ವಿದ್ಯಾರ್ಥಿಗಳ ಪೋಷಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.ಸಂಜೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ವಿವಿಧ ಸಾಂಸ್ಕೃತಿಕ ನೃತ್ಯ ವೈವಿದ್ಯ ಹಾಗೂ ದಶವತಾರ ನೃತ್ಯ ರೂಪಕ ಜನ ಮನ ಸೆಳೆಯಿತು.














