Coastal Bulletin

ರಾಜ್ಯದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗ್ರಾ.ಪಂ. ಅಧ್ಯಕ್ಷರ ಗೌರವಧನ 3 ಸಾವಿರದಿಂದ 6 ಸಾವಿರ, ಗ್ರಾ.ಪಂ. ಉಪಾಧ್ಯಕ್ಷರ ಗೌರವಧನ 2 ಸಾವಿರದಿಂದ 4 ಸಾವಿರ, ಗ್ರಾ.ಪಂ. ಸದಸ್ಯರ ಗೌರವಧನ 1 ಸಾವಿರದಿಂದ 2 ಸಾವಿರಕ್ಕೆ ಹೆಚ್ಚಿಸಿ ಗ್ರಾಮೀಣಾಭಿವೃದ್ಧಿ ಮತ್ತು

ಪಂಚಾಯತ್​​ರಾಜ್​ ಇಲಾಖೆ ಆದೇಶಿಸಿದೆ.

ಇತ್ತೀಚೆಗೆ ಕರ್ನಾಟಕ ಸರ್ಕಾರ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರಿಗೆ ಸಿಹಿಸುದ್ದಿ ನೀಡಿತ್ತು. ಅತಿಥಿ ಶಿಕ್ಷಕರ ಗೌರವ ಸಂಭಾವನೆಯನ್ನು ಎರಡೂವರೆ ಸಾವಿರ ರೂಪಾಯಿ ಹೆಚ್ಚಳ ಮಾಡಿ ಆದೇಶ ಹೊರಡಿಸಿತ್ತು.

Leave a Comment