ಬಂಟ್ವಾಳ : 20ನೇ ಶತಮಾನದ ಇತಿಹಾಸ ಪುರುಷರೂ ಲಕ್ಷಾಂತರ ಪಂಡಿತ ಶಿಷ್ಯ ವೃಂದದ ಗುರುವರ್ಯರೂ ವಿದ್ವತ್ ಜಗತ್ತಿನ ಸೂರ್ಯನೂ ಆದ ಶೈಖುನಾ ಶಂಸುಲ್ ಉಲಮಾ ಇ.ಕೆ ಅಬೂಬಕ್ಕರ್ ಮುಸ್ಲಿಯಾರ್‌ರವರ ಮೂವತ್ತನೇ ಆಂಡ್ ನೇರ್ಚೆ, ಕಾಸರಗೋಡಿನ ಕುಣಿಯ ಎಂಬಲ್ಲಿ 2026 ಫೆಬ್ರವರಿ 4ರಿಂದ 8ರ ತನಕ ನಡೆಯುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 100ನೇ ವಾರ್ಷಿಕ ಅಂತಾರಾಷ್ಟ್ರೀಯ ಮಹಾ ಸಮ್ಮೇಳನ ಹಾಗೂ ದಾರಿಮಿ ಪಂಡಿತರ ಕೇಂದ್ರ ಸಂಸ್ಥೆಯಾದ ನಂದಿ ದಾರುಸ್ಸಲಾಮ್ ವಿಶ್ವವಿದ್ಯಾಲಯದ 50ನೇ ವಾರ್ಷಿಕದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ದಾರಿಮೀಸ್ ಅಸೋಸಿಯೇಷನ್ ವತಿಯಿಂದ ಅಕ್ಟೋಬರ್ 21ನೇ ಮಂಗಳವಾರ ಬೆಳಿಗ್ಗೆ 9 ಗಂಟೆಯಿಂದ ಪಾಣೆಮಂಗಳೂರು ಅಕ್ಕರಂಗಡಿ ಹೆಚ್.ಹೆಚ್ ಕನ್ವೆನ್ಸನ್ ಸೆಂಟರಿನಲ್ಲಿ ಅನುಸ್ಮರಣಾ ಸಮ್ಮೇಳನ ಹಾಗೂ ಪ್ರಚಾರ ಸಭೆ ನಡೆಯಲಿದೆ ಎಂದು ದ.ಕ.ಜಿಲ್ಲಾ ಸಮಸ್ತದ ಕಾರ್ಯದರ್ಶಿ ಕೆ.ಐ ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲಅವರು ಶನಿವಾರ ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಶೈಖುನಾ ಸಯ್ಯದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಬಳ್‌ರವರು ಸಮಾರಂಭವನ್ನು ಉದ್ಘಾಟಿಸಲಿದ್ದು ಜಾಮಿಲಿ ದಾರುಸ್ಸಲಾಮಿನ ಶೈಖುನಾ ಎ.ವಿ ಅಬ್ದುರ್ರಹ್ಮಾನ್ ಮುಸ್ಲಿಯಾರ್‌ರವರು ಅನುಸ್ಮರಣಾ ಭಾಷಣ ಮಾಡಲಿದ್ದು ಸಮಸ್ತ ಕೇಂದ್ರ ಮುಶಾವರದ ಸದಸ್ಯರಾದ ಶೈಖುನಾ ಬಿ.ಕೆ ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣರವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದು ಶೈಖುನಾ ಉಸ್ಮಾನುಲ್ ಫೈಝಿ
ತೋಡಾರುರವರು ಸಂದೇಶ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ನಯ್ಯದ್ ಝನುಲ್ ಅಬಿದೀನ್ ಜಿಫ್ರೀ ತಂಬಳ್ ಬೆಳ್ತಂಗಡಿಯವರು ಪ್ರಾರ್ಥನೆಗೆ ನೇತೃತ್ವ ನೀಡಲಿದ್ದು ಜಿಲ್ಲಾ ದಾರಿಮೀಸ್ ಸಮಿತಿಯ ಅಧ್ಯಕ್ಷರಾದ ಕೆ.ಬಿ ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿಯವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಅನೇಕ ಗಣ್ಯರು ಹಾಜರಿರುವರು ಎಂದು ಅವರು ತಿಳಿಸಿದರು.
ಕೆ.ಎಂ.ಖಾಸಿಂ ದಾರಿಮಿ, ಜುಬೈರ್ ದಾರಿಮಿ ಅಕ್ಕರಂಗಡಿ,.ಎಸ್.ಎಚ್..ಹೈದರ್ ದಾರಿಮಿ, ಕೆ.ಬಿ.ಅಬ್ದುಲ್ ದಾರಿಮಿ ಉಪಸ್ಥಿತರಿದ್ದರು.















