ಬಂಟ್ವಾಳ: ವಿಶ್ವಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಂಚಿ ಘಟಕ ಕಲ್ಲಡ್ಕ ಪ್ರಖಂಡ ಶ್ರೀ ಮಹಾ ಪವಮಾನ ಯಾಗ ಸಮಿತಿ – 2025 ಮಂಚಿ ಬಂಟ್ವಾಳ ತಾಲೂಕು ಇದರ ಜಂಟಿ ಸಹಭಾಗಿತ್ವದಲ್ಲಿ ಅ.26ನೇ ಆದಿತ್ಯವಾರ ಶ್ರೀ ಮಹಾ ಪವಮಾನ ಯಾಗ, ಶ್ರೀರಾಮತಾರಕ ಯಜ್ಞ,ಸಾಮೂಹಿಕ ಗೋಪೂಜೆ, ಧರ್ಮ ಜಾಗೃತಿ ಸಭೆಯು ಮಂಚಿ ಗ್ರಾಮದ ಶ್ರೀ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಶ್ರೀ ಮಹಾಪವಮಾನ ಯಾಗ ಸಮಿತಿ ಅಧ್ಯಕ್ಷ ವಿಕಾಸ್ ಪುತ್ತೂರು ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಹೇಳಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.)ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಅವರು ದೀಪೋಜ್ವಲನೆ ಮಾಡಲಿದ್ದಾರೆ. ವಿಹಿಂಪ ಮಂಚಿ ಘಟಕ ಅಧ್ಯಕ್ಷ ರಮೇಶ್ ರಾವ್ ಪತ್ತುಮುಡಿ ಅವರು ಯಾಗದ ಯಜಮಾನರಾಗಿದ್ದು, ಕಶೆಕೋಡಿ ಸೂರ್ಯನಾರಾಯಣ ಭಟ್ ಯಾಗದ ಪೌರೋಹಿತ್ಯ ವಹಿಸಲಿದ್ದಾರೆ ಎಂದರು.
ಬೆಳಿಗ್ಗೆ 9 ಗಂಟೆ ವೇಳೆಗೆ ಸಾಮೂಹಿಕ ಗೋಪೂಜೆ, 11 ಗಂಟೆಗೆ ಯಾಗದ ಪೂರ್ಣಾಹೂತಿ, 11.30 ರಿಂದ ಧರ್ಮಜಾಗೃತಿ ಸಭೆಯ ನಡೆಯಲಿದ್ದು ಶ್ರೀ ಶ್ರೀ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಶ್ರೀ ಕ್ಷೇತ್ರ ಕನ್ಯಾಡಿ ಆಶೀರ್ವಾಚನ ನೀಡಲಿದ್ದಾರೆ.ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಸಹಿತ ಅನೇಕ ಗಣ್ಯರು ಉಪಸ್ಥಿತರಿರುವರು, ಯಾಗದ ಯಶಸ್ಸಿಗೆ ಈಗಾಗಲೇ ಪೂರ್ವತಯಾರಿಗಳನ್ನು ಮಾಡಲಾಗಿದ್ದು, ವಿವಿಧ ಸಮಿತಿಗಳ ರಚನೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಯಾಗ ಸಮಿತಿ ಪ್ರಮುಖರಾದ ಪದ್ಮನಾಭ ಸಾಲಿಯಾನ್, ರಮೇಶ್ ರಾವ್ ಪತ್ತುಪುಡಿ, ಯಶೋಧ ಶೆಟ್ಟಿ, ಮಾದವ ಅಂಚನ್, ಸಂತೋಷ್ ಗುಂಡಿಮಜಲು, ದೀಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.















