ಬ್ರಹ್ಮರಕೂಟ್ಲು:ಶ್ರೀ ರಾಮ ಬಾಲಗೋಕುಲದ ಅಶ್ರಯದಲ್ಲಿ ಗೋಕುಲೋತ್ಸವ ಕಾರ್ಯಕ್ರಮ

Coastal Bulletin
ಬ್ರಹ್ಮರಕೂಟ್ಲು:ಶ್ರೀ ರಾಮ ಬಾಲಗೋಕುಲದ ಅಶ್ರಯದಲ್ಲಿ ಗೋಕುಲೋತ್ಸವ ಕಾರ್ಯಕ್ರಮ

ಬಂಟ್ವಾಳ :ಶ್ರೀ ರಾಮ ಬಾಲಗೋಕುಲ ಬ್ರಹ್ಮರಕೂಟ್ಲು ಕಳ್ಳಿಗೆ ಇದರ ವತಿಯಿಂದ ಗೋಕುಲೋತ್ಸವ ಕಾರ್ಯಕ್ರಮ ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದಲ್ಲಿ ನೆರವೇರಿತು.

ಬಾಲಗೋಕುಲದ ಮಕ್ಕಳನ್ನು ಮುದ್ದುಕೃಷ್ಣ ಬಾಲ ಕೃಷ್ಣ ರಾಧೆ ಯಾಗಿ ಸೇರಿದ ಸರ್ವ ಬಂಧುಗಳು ಕಣ್ತುಂಬಿಕೊಂಡರು. ಬಾಲಗೋಕುಲದ ಮಾತಾಜಿ ಗಳಾದ ಚೈತ್ರಾ, ಮನಿಷಾ, ಮನಿಷಾ ಯಸ್, ಜೀವಿತಾ, ಸ್ವರೇಣ್ಯ, ರಚನಾ ಇವರ ಮಾರ್ಗದರ್ಶನದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನೆರವೇರಿತು.

ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಯನ್ನು ಶ್ರೀಕಾಂತ್ ದರಿಬಾಗಿಲು ವಹಿಸಿಕೊಂಡರು. ಹರೀಶ್ ನೈನಾಡ್ ಪ್ರಮುಖ ಭಾಷಣ ಮಾಡಿದರು, ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಶಶಿಧರ್ ಬ್ರಹ್ಮರಕುಟ್ಲು ಬಾಲಗೋಕುಲದ ಮಾತಾಜಿ ಕುಮಾರಿ ಚೈತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವನ್ ರಾಜ್ ಪ್ರಾಸ್ತವಿಕ ವಾಗಿ ಬಾಲಗೋಕುಲದ ಬಗ್ಗೆ ಮಾತನಾಡಿದರು.

ನಿಹಾಲ್ ಸ್ವಾಗತಿಸಿ,ಧನ್ವಿತ್ ರಾಜ್, ಮನೋಹರ್ ಕಂಜತ್ತೂರ್ ಧನ್ಯವಾದ ನೆರವೇರಿಸಿ,ನವೀನ ಬಂಗೇರ

ಪಲ್ಲ, ಮನಿಷಾ,ನಿಕಿತಾ ನರೇಂದ್ರ, ದೇವಿಪ್ರಸಾದ್ ಕಾರ್ಯಕ್ರಮ ನಿರೂಪಣೆಯಲ್ಲಿ ಸಹಕರಿಸಿದರು.

ಸಭಾ ಕಾರ್ಯಕ್ರಮ ಮುನ್ನ ಮೊಸರು ಕುಡಿಕೆ ಭವ್ಯ ಶೋಭಯಾತ್ರೆ ಪೆರಿಯೋಡಿ ಬೀಡುವಿನಲ್ಲಿ ಪ್ರಾರ್ಥಿಸಿ,ಅಲ್ಲಿಂದ ಕೃಷ್ಣವೇಷಧಾರಿ ಮಕ್ಕಳು ಸನಾತನ ಘೋಷ ವಾಕ್ಯಗಳೊಂದಿಗೆ ಮಡಿಕೆ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆ ಸಾಗಿ ಬರುವ ರಸ್ತೆಯ ಉದ್ದಕ್ಕೂ ಒಂ ಗಣೇಶ ಗಣೇಶ್ ಗೆಳೆಯರ ಬಳಗ ದರಿಬಾಗಿಲು, ಶ್ರೀ ರಾಮ್ ನಾಸಿಕ್ ಬ್ಯಾಂಡ್ ಪಲಿಕೆ, BNC ಬ್ರಹ್ಮರಕುಟ್ಲು, ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಮಂದಿರದ ತಂಡಗಳಿಂದ ಅಲಂಕೃತ ವಾದ ಮೊಸರು ಕುಡಿಕೆ ಕಟ್ಟಿ ಅಭೂತ ಪೂರ್ವ ಸಹಕಾರ ನೀಡಿದರು... ಮೆರವಣಿಗೆಯಲ್ಲಿ ಬಾಲ ಶ್ಯಾಮ ಭಜನಾ ತಂಡ ಕುಟ್ಟಿಕಲ ಇವರ ಕುಣಿತ ಭಜನೆ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತ್ತು.

Leave a Comment