ಬಂಟ್ವಾಳ :ತಾಲೂಕಿನ ಪ್ರತಿಷ್ಠಿತ ಶ್ರೀ ಸಾಯಿ ಕಿಡ್ಸ್ ಜೋನ್ ವಿದ್ಯಾಸಂಸ್ಥೆ ಬಿ ಸಿ ರೋಡ್ ಇಲ್ಲಿ ಜೆಸಿಐ ಬಂಟ್ವಾಳ ಇವರ ಸಹಭಾಗಿತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಜೆಸಿಐ ಬಂಟ್ವಾಳ ಇದರ ಅಧ್ಯಕ್ಷ ರಾದ ಶ್ರಿ ರಾಜೇಂದ್ರ ಇವರು ಶಾಲಾ ವಠಾರದಲ್ಲಿ ಗಿಡಗಳನ್ನು ನೆಟ್ಟು ವಿವಿಧ ತಳಿಯ ಗಿಡಗಳನ್ನು ಪೋಷಕರಿಗೆ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರವೇ ಮನುಷ್ಯನ ಉಸಿರು .ಮರಗಳು ಪರಿಸರದ ಜೀವಾಳ.ಪರಿಸರದ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಸಭೆಯಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರಿ
ಅಭಿಲಾಷ್ ಭಟ್.ಉಪಾಧ್ಯಕ್ಷರಾದ ಶ್ರೀಮತಿ ಶಿಲ್ಪ ತೇಜಸ್ .ಕೋಶಾಧ್ಯಕ್ಷ ರಾದ ಶ್ರಿ ಜ್ಜ್ಞಾನೇಶ್ ರಾವ್ ಶಾಲಾ ಸಂಚಾಲಕರಾದ ಐತಪ್ಪ ಪೂಜಾರಿ .ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ ಅಮೀನ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ದಿಯನ್ಶ್ ಪರಿಸರದ ಬಗ್ಗೆ ಮಾತನಾಡಿದರು.ವಿದ್ಯಾರ್ಥಿಗಳಾದ ಯಶೀಕ ಸ್ವಾಗತಿಸಿ ರಿಷ ಟಿ ಕುಲಾಲ್ ವಂದಿಸಿ ಯಸ್ವಿ ಕಾರ್ಯಕ್ರಮ ನಿರೂಪಿಸಿದರು.ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.















