ಬಂಟ್ವಾಳ : ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಕಲಾಕೇಂದ್ರದ ಭರತನಾಟ್ಯ ತರಗತಿಯ ವಾರ್ಷಿಕ ಸಂಭ್ರಮವು ಜ.22 ರಂದು ಸಂಜೆ 4.15 ಕ್ಕೆ ಫರಂಗಿಪೇಟೆ ಸೇವಾಂಜಲಿ ಸಭಾಗೃದಲ್ಲಿ ನಡೆಯಲಿದೆ.
ಅತಿಥಿಗಳಾಗಿ ನ್ಯಾಯವಾದಿ ಉಮಾ ಎನ್. ಸೋಮಾಯಾಜಿ, ಶ್ರೀ ಕ್ಷೇತ್ರ ಧ.ಗ್ರಾ ಯೋ.ತುಂಬೆ ವಲಯ ಮೇಲ್ವಿಚಾರಕಿ ಮಮತಾ ಭಾಗವಹಿಸಲಿದ್ದಾರೆ. ಬಳಿಕ ಸೇವಾಂಜಲಿ ಕಲಾವಿದರಿಂದ
ಭರತನಾಟ್ಯ ಪ್ರದರ್ಶನ ಗೊಳ್ಳಲಿದೆ ಎಂದು ವಿಧುಷಿ ಮಂಜುಳಾ ಸುಬ್ರಮಣ್ಯ ಹಾಗೂ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














