ಬಂಟ್ವಾಳ ತಾಲೂಕಿನ ಗ್ರಾಮ ಭಿವೃದ್ಧಿ ಯೋಜನೆಯ ತುಂಬೆ ವಲಯ ವ್ಯಾಪ್ತಿಗೆ ಒಳಪಟ್ಟ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಪರಂಗಿಪೇಟೆ ಶ್ರೀ ಆಂಜನೇಯ ದೇವಸ್ಥಾನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ರೂ 5 ಲಕ್ಷ ಮಂಜೂರು ಗೊಂಡಿದ್ದು ಇದರ ಚೆಕ್ಕನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಮಹಾಬಲ ಕುಲಾಲ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ, ವಲಯದ ಜನಜಾಗೃತಿ ವೇದಿಕೆಯ ಸದಸ್ಯರಾದ ಸದಾನಂದ ಆಳ್ವ ಅರ್ಕುಲ ,ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಮೇಶ್ ಶೆಟ್ಟಿ ಬರ್ಕೆ, ಚಂದ್ರಶೇಖರ್ ಗಾಂಭೀರ್, ಸಂತೋಷ ಗಾಂಭೀರ, ತುಂಬೆ ವಲಯದ ಮೇಲ್ವಿಚಾರಕಿ ಮಮತಾ ಸಂತೋಷ್, ಸೇವಾ ಪ್ರತಿನಿಧಿಗಳಾದ ಅಮಿತ ಮಲ್ಲಿಕಾ , ಶೈಲಜಾ, ಪರಂಗಿಪೇಟೆ ಹಾಗೂ ಸುಜೀರ್ ಒಕ್ಕೂಟದ ಅಧ್ಯಕ್ಷರುಗಳಾದ
ಸುಕೇಶ್ ಶೆಟ್ಟಿ, ಮತ್ತು ಲೀಡಿಯಾ ಪಿಂಟೋ, ಪದಾಧಿಕಾರಿಗಳಾದ ಸಂದೀಪ್, ನಾಗೇಶ್ ,ಸಂತೋಷ , ರಾಧಿಕಾ, ಗಣೇಶ್ ವಿನುತಾ ,ಯಶವಂತ ಸದಸ್ಯರಾದ,ಗೀತಾ, ಸೀತಾ, ಸುಂದರಿ , ಮೋಹನ್ ಸುಜೀರ್, ಸುರೇಶ್, ಜಗದೀಶ್ ,ಮನೋಹರ ನಾಯ್ಕ್ ,ಸುನಿತಾ, ಚಾರ್ಲಿ, ಮನೋಜ್ ತಪ್ಪೆ ಕಲ್ಲು, ಶಿವರಾಮ್ ಶೆಟ್ಟಿ ತೇವು, ಸತೀಶ್ ಶೆಟ್ಟಿ ಕಲ್ಲತಡಮೆ , ಜಯಂತ ಪದೇಂಜರ್ ಮೊದಲಾದವರು ಉಪಸ್ಥಿತರಿದ್ದರು.














