ಬಂಟ್ವಾಳ :ನ.19, ಕುಲಾಲ ಭವನದಲ್ಲಿ ತುಡರ್ ಪರ್ಬದ ಐಸಿರ - 2023 ಕಾರ್ಯಕ್ರಮ.

Coastal Bulletin
ಬಂಟ್ವಾಳ :ನ.19, ಕುಲಾಲ ಭವನದಲ್ಲಿ ತುಡರ್ ಪರ್ಬದ ಐಸಿರ - 2023 ಕಾರ್ಯಕ್ರಮ.

ಬಂಟ್ವಾಳ :ತಾಲೂಕು ಕುಲಾಲ ಸುಧಾರಕ ಸಂಘ ಇದರ ಆಶ್ರಯದಲ್ಲಿರುವ ಕುಲಾಲ ಸೇವಾದಳ ಮತ್ತು ಮಹಿಳಾ ಘಟಕದ ವತಿಯಿಂದ ನವೆಂಬರ್ ೧೯ರಂದು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಸಂಜೆ ತುಡರ್ ಪರ್ಬದ ಐಸಿರ ೨೦೨೩ ಗೂಡುದೀಪ ಸ್ಪರ್ಧೆ ಮತ್ತು ಅವಲಕ್ಕಿ ತಯಾರಿ ಸ್ಪರ್ಧೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಶೇಖರ್ ಬಿ., ಬಂಟ್ವಾಳ ತಾಲೂಕು ಕುಲಾಲ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಮತ್ತು ಎಸ್‌ಸಿಡಿಸಿಸಿ ಬ್ಯಾಂಕ್‌ನ ಬಂಟ್ವಾಳ ಶಾಖೆಯ ಪ್ರಬಂಧಕರಾದ ಗಾಯತ್ರಿ

ಆಗಮಿಸಲಿದ್ದಾರೆ. ದೀಪಾವಳಿ ಸಂದರ್ಭ ನಡೆದ ಫೋಟೋ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮ ನಡೆಯಲಿದೆ ಎಂದು ಕುಲಾಲ ಸೇವಾದಳದ ಕಾರ್ಯದರ್ಶಿ ಜಯಂತ ಅಗ್ರಬೈಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment