ನೇರಂಬೋಳು: ನ.19, ಯಕ್ಷಗಾನ ಬಣ್ಣಗಾರಿಕಾ ತರಬೇತಿ ಹಾಗೂ ಮಾಹಿತಿ ಕಾರ್ಯಾಗಾರ,

Coastal Bulletin
ನೇರಂಬೋಳು: ನ.19, ಯಕ್ಷಗಾನ ಬಣ್ಣಗಾರಿಕಾ ತರಬೇತಿ ಹಾಗೂ ಮಾಹಿತಿ ಕಾರ್ಯಾಗಾರ,

ಬಂಟ್ವಾಳ : ಬಂಟ್ವಾಳ ದರ್ಬೆ ಯಕ್ಷಕಾವ್ಯ ತರಂಗಿಣಿ ಮತ್ತು ನೇರಂಬೋಳು ಶ್ರೀ ರಕ್ತೇಶ್ವರಿ ಯುವಕ ಸಂಘ ಇದರ ಜಂಟಿ ಆಶ್ರಯದಲ್ಲಿ ನವೆಂಬರ್ ೧೯ರಂದು ಬೆಳಿಗ್ಗೆ ನೇರಂಬೋಳು ಸಭಾಭವನದಲ್ಲಿ ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳಿಗೆ ಬಣ್ಣಗಾರಿಕೆ ಶಿಬಿರ ನಡೆಯಲಿದೆ.

ಸಭಾಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ರಾಜ್ಯಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿ ಮಾಡಲಿದ್ದಾರೆ. ಸಭಾಧ್ಯಕ್ಷತೆಯನ್ನು ರಕ್ತೇಶ್ವರಿ ಯುವಕ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಯಕ್ಷಕಾವ್ಯ ತರಂಗಿಣಿಯ ಅಧ್ಯಕ್ಷೆ ಕು. ಸಂಧ್ಯಾ ಪೂಜಾರಿ ದರ್ಬೆ, ಶ್ರೀ ರಕ್ತೇಶ್ವರಿ ಯುವಕ ಸಂಘದ ಗೌರವಾಧ್ಯಕ್ಷ ಮನೋಹರ ನೇರಂಬೋಳು, ಶಕ್ತಿನಗರ ನಾಗಬ್ರಹ್ಮ ಮಹಮ್ಮಾಯಿ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಗುರುಪ್ರಸಾದ್, ಶ್ರೀ ರಕ್ತೇಶ್ವರಿ ಯುವಕ

ಸಂಘದ ಗೌರವ ಸಲಹೆಗಾರ ಚಂದ್ರಹಾಸ ಟೈಲರ್, ಶ್ರೀ ರಕ್ತೇಶ್ವರಿ ಯುವಕ ಸಂಘದ ಸಾಂಸ್ಕೃತಿಕ ಕಾಂiiದರ್ಶಿ ಸಚಿನ್, ಯುವಭಾಗವತ ಸುಶಾಂತ್ ಕೈಕಂಬ, ವಹಿಸಲಿದ್ದಾರೆ. ಇದೇ ಸಂದರ್ಭ ಪ್ರಸಾಧನ ಕಲಾವಿದ ಪ್ರಭಾಕರ ಶೆಟ್ಟಿ ತೆಂಕಕಾರಂದೂರು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾಕಾರ್ಯಕ್ರಮದ ನಂತರ ಮಾಹಿತಿ ಕಾರ್ಯಾಗಾರ, ವ್ಯಕ್ತಿತ್ವ ವಿಕಸನ ಮತ್ತು ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಯೋಜನಾ ಸಂಘಟನೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment