ಬಂಟ್ವಾಳ: ಕೆನರಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಿರ್ಮಾಣಗೊಳ್ಳಲಿರುವ ಡಾ| ಪಿ.ದಯಾನಂದ ಪೈ- ಪಿ.ಸತೀಶ್ ಪೈ ಆಡಿಟೋರಿಯಂಗೆ ಸೆ.18ರಂದು ಸೋಮವಾರ ಭೂಮಿ ಪೂಜೆ ನಡೆಯಿತು.
ಭೂಮಿ ಪೂಜೆ ನಡೆಸಿದ ಸೆಂಚುರಿ ಗ್ರೂಪ್‌ನ ಚೇರ್‌ಮೆನ್ ಡಾ| ಪಿ.ದಯಾನಂದ ಪೈ ಮಾತನಾಡಿ, ನಮ್ಮ ಸಂಪಾದನೆಯ ಸಂಪತ್ತನ್ನು ಸಮಾಜದ ಉತ್ತಮ ಕಾರ್ಯಗಳಿಗೆ ವಿನಿಯೋಗಿಸುವದರಲ್ಲಿ ವಿಶೇಷ ತೃಪ್ತಿ ಇದ್ದು, ಜೀವನದ ಪ್ರತಿ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಬೇಕಿದೆ. ಕೆನರಾ ವಿದ್ಯಾಸಂಸ್ಥೆಗಳು ಸಾವಿರಾರು ಯುವ ಸಂಪತ್ತನ್ನು ಸಮಾಜಕ್ಕೆ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆನರಾ ಹೈಸ್ಕೂಲ್ ಅಸೋಸಿಯೇಶನ್
ಅಧ್ಯಕ್ಷ ವಾಸುದೇವ ಕಾಮತ್ ಹಾಗೂ ಗೌರವ ಕಾರ್ಯದರ್ಶಿ ರಂಗನಾಥ ಭಟ್ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ದಯಾನಂದ ಪೈಯವರ ಪತ್ನಿ ಮೋಹಿನಿ ದಯಾನಂದ ಪೈ, ಸಹೋದರ ಪಿ.ಸತೀಶ್ ಪೈ, ಸಬಿತಾ ಸತೀಶ್ ಪೈ ವೇದಿಕೆಯಲ್ಲಿದ್ದರು.
ಅಸೋಸಿಯೇಶನ್ ಉಪಾಧ್ಯಕ್ಷ ಎಂ.ಪದ್ಮನಾಭ ಪೈ ಸ್ವಾಗತಿಸಿದರು. ಆಡಳಿತ ಮಂಡಳಿಯ ಸಂಚಾಲಕ ಪ್ರದೀಪ್ ಜಿ. ಪೈ ವಂದಿಸಿದರು. ಪ್ರಾಧ್ಯಾಪಕ ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.















