ಫರಂಗಿಪೇಟೆ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರೀಕರಣ ಯೋಜನೆ ಬಗ್ಗೆ ಮಾಹಿತಿ ಶಿಬಿರ

Coastal Bulletin
ಫರಂಗಿಪೇಟೆ: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರೀಕರಣ ಯೋಜನೆ ಬಗ್ಗೆ ಮಾಹಿತಿ ಶಿಬಿರ

ಬಂಟ್ವಾಳ :ಶ್ರೀ ರಾಮ ಶಾಲೆ ಫರಂಗಿಪೇಟೆ ಇಲ್ಲಿ ರೋಟರಿ ಕ್ಲಬ್ ಫರಂಗಿಪೇಟೆ ಇದರ ವತಿಯಿಂದ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರೀಕರಣ ಯೋಜನೆಯ ಬಗ್ಗೆ ಮಾಹಿತಿ ನೀಡುವ ಕಾರ್ಯಾಗಾರವನ್ನು ಶ್ರೀ ರಾಮ ಶಾಲೆಯ ಸಂಚಾಲಕರಾದ ಗೋವಿಂದ ಶೆಣೈಯವರು ಉದ್ಘಾಟಿಸಿದರು.

ಫರಂಗಿಪೇಟೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ರೊ.ಸಂಕಪ್ಪ ಶೆಟ್ಟಿ ಉಜಾರ್ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ!ಎ.ಎ.ಫಝಲ್ ರವರು ಯೋಜನೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.

ರೋಟರಿ ಕ್ಲಬ್ ಫರಂಗಿಪೇಟೆ ಇದರ ಖಜಾಂಚಿ ರೊ.ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ಕಾರ್ಯಕ್ರಮ

ನಿರೂಪಿಸಿದರು. ಕಾರ್ಯದರ್ಶಿ ರೊ.ಹರಿಶ್ಚಂದ್ರ ಆಳ್ವ ವಂದನಾರ್ಪಣೆ ಮಾಡಿದರು. 

ಈ ಸಂದರ್ಭದಲ್ಲಿ ರೊ. ರಮೇಶ್ ತುಂಬೆ, ರೋ.ಸುರೇಂದ್ರ ಕಂಬ್ಳಿ, ರೊ.ರಮೇಶ್ ಶೆಟ್ಟಿ ನಡಿಗುತ್ತು, ರೊ.ಹೇಮಾ ಭಂಡಾರಿ, ಶಿಕ್ಷಕ ದೇವದಾಸ ಕೆ ಆರ್,ಮತ್ತಿತರರು ಉಪಸ್ಥಿತರಿದ್ದರು.ಸುಮಾರು 60 ಆಸಕ್ತ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು

Leave a Comment