Coastal Bulletin

ಮಂಗಳೂರಿನ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು 10 ಲಕ್ಷ ರೂಪಾಯಿ ದೇಣಿಗೆ ಯನ್ನು ಶ್ರೀ ಕ್ಷೇತ್ರ ಮಾಣಿಲ ದ ಪರಮಪೂಜ್ಯ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಗೆ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ರ. ಯಾನೆ ಕುಲಾಲರ  ಮಾತೃ ಸಂಘದ ಅಧ್ಯಕ್ಷ ಮಯೂರ್  ಉಳ್ಳಾಲ್, ಆಡಳಿತ ಮೋಕ್ತೇಸರ ಪುರುಷೋತ್ತಮ ಕುಲಾಲ್ ಕಲ್ಬಾವಿ,ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ದಾಮೋದರ ಎ, ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ  ಬಿ ಪ್ರೇಮಾನಂದ ಕುಲಾಲ್, ಜೀರ್ಣೋದ್ಧಾರ

ಸಮಿತಿಯ ಪ್ರಧಾನ ಸಂಚಾಲಕ ಸುರೇಶ್ ಕುಲಾಲ್ ,ಜಿಲ್ಲಾ ಮಾತೃ ಸಂಘದ ಜೊತೆ ಕಾರ್ಯದರ್ಶಿ ಪ್ರದೀಪ್ ಅತ್ತಾವರ್   , ಮಾತೃ ಸಂಘದ ಸೇವಾ ದಳಪತಿ ಕಿರಣ್ ಅಟ್ಲೂರು, ವಿಶ್ವ ಭಾರತಿ ಫ್ರೆಂಡ್ ಸರ್ಕಲ್ ನ ಅಧ್ಯಕ್ಷ ಮಾಜಿ  ರಾಜೇಶ್ ಸಾಲಿಯಾನ್ ಉಪಸ್ಥಿರಿದ್ದರು.

Leave a Comment