ಬಂಟ್ವಾಳ :ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ನೀಡಿರುವ ರೂ 3 ಲಕ್ಷ ಅನುದಾನದಿಂದ ಶ್ರೀರಾಮಾ ಹಿರಿಯ ಪ್ರಾಥಮಿಕ ಶಾಲೆ ಅರ್ಕುಳ ಫರಂಗಿಪೇಟೆಗೆ ಶಾಲಾ ಪಿಠೋಪಕರಣ ಮತ್ತು ಎಲ್ ಇ ಡಿ ಟಿವಿ ಗಳನ್ನು ಅಳವಡಿಸಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಜಯರಾಮ ಶೇಕ , ಸದಸ್ಯರಾದ ದಾಮೋಧರ ಶೆಣೈ , ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ಪ್ರಾಂಶುಪಾಲರಾದ ಡಾ ಜಯಕುಮಾರ್ ಶೆಟ್ಟಿ ಅರ್ಕುಳಬೀಡು ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಅಡ್ಯಾರ್ ಪಂಚಾಯತ್ ಸದಸ್ಯೆ ಸುಚಿತ್ರ , ಶಾಲಾ
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಆಶಾಚಂದ್ರ , ಆಂಗ್ಲ ಮಾಧ್ಯಮ ವಿಭಾಗದ ಅಧ್ಯಕ್ಷ ದಿನಕರ ಕರ್ಕೇರ , ಮೇರಮಜಲು ಪಂಚಾಯತ್ ಅಧ್ಯಕ್ಷೆ ಜಯಶ್ರೀ ಕರ್ಕೇರ , ಶಾಲಾ ಮುಖ್ಯ ಶಿಕ್ಷಕಿ ಶೈಲಜಾ , ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಪ್ರಮೀಳಾ ಉಪಸ್ಥಿತರಿದ್ದರು , ನಿವೃತ್ತ ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ ಸ್ವಾಗತಿಸಿ ದರು














