ಬಂಟ್ವಾಳ :ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಗೋಲ್ ಮಾಲ್ ಅಪಾದನೆ. ಆಡಳಿತ ಮಂಡಳಿಯಿಂದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪ್ರಾರ್ಥನೆ.

Coastal Bulletin
ಬಂಟ್ವಾಳ :ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಗೋಲ್ ಮಾಲ್ ಅಪಾದನೆ. ಆಡಳಿತ ಮಂಡಳಿಯಿಂದ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಪ್ರಾರ್ಥನೆ.

ಬಂಟ್ವಾಳ :ಸಮಾಜ ಸೇವಾ ಸಹಕಾರಿ ಸಂಘದಲ್ಲಿ ಗೋಲ್ ಮಾಲ್ ಶಿರ್ಷಿಕೆಯಲ್ಲಿ ಅಪಾದನೆ ಮಾಡಿ ಸಮಾಜ ಸೇವ ಸಹಕಾರಿ ಸಂಘಕ್ಕೆ ನಷ್ಟವನ್ನು ಉಂಟು ಮಾಡಿ ಆಡಳಿತ ಮಂಡಲಿಗೆ ಕೆಟ್ಟ ಹೆಸರನ್ನು ತರುವ ಉದ್ದೇಶದಿಂದ ಅಬೂಬಕ್ಕರ್ ಸಿದ್ದಿಕ್ಕಿನೊಂದಿಗೆ ಜೊತೆಗೂಡಿ ಸುರೇಶ್ ಕುಲಾಲ್ ಮತ್ತು ಆಡಳಿತ ಮಂಡಳಿ ಸಿಬ್ಬಂದಿಗಳು 2.11 ಕೋಟಿ ರೂಗಳ ಚಿನ್ನಾಭರಣ ಸಾಲ ತಗೊಂಡು ಸಮಾಜ ಸೇವ ಸಹಕಾರಿ ಸಂಘಕ್ಕೆ ಮೋಸ ಮಾಡಿದ್ದಾರೆ ಎಂದು ಸುಳ್ಳು ಆಪಾದನೆ ಮಾಡಿದವರ ವಿರುದ್ಧ ಸಂಘದ ಅಧ್ಯಕ್ಷ ಸುರೇಶ್ ಕುಲಾಲ್ ಸಹಿತ ಆಡಳಿತ ಮಂಡಳಿ ಸದಸ್ಯರು ಕುಲಶೇಖರ ಶ್ರೀ ವೀರನಾರಾಯಣ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿ ದೂರು ದಾಖಲಿಸಿ ಪತ್ರಿಕಾ ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಚಾರ ಮಾಡಿ ಸಂಘ ಮತ್ತು ಆಡಳಿತ ಮಂಡಳಿ ,ಸಿಬ್ಬಂದಿ ವರ್ಗದವರ ಮಾನ ಹರಾಜು ಮಾಡಿದವರಿಗೆ ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಈ ವಿಚಾರದಲ್ಲಿ ಬೆಂಬಲಿಸಿ ಆರೋಪಿಸಿದವರಿಗೆ

ಕುಲದೇವರಾದ ವೀರನಾರಾಯಣ ಸ್ವಾಮಿಯಲ್ಲಿ ಪ್ರಾರ್ಥಿಸಿ," ನಾವು ಈ ಸಾಲದ ವ್ಯವಹಾರದಲ್ಲಿ ಬಾಗಿಯಾಗಲಿಲ್ಲ ಎಂದು ಮನಸಾಕ್ಷಿಯಾಗಿ ಪ್ರಾರ್ಥಿಸುತ್ತೇವೆ ಹಾಗೂ ನಮ್ಮ ಮೇಲೆ ಆರೋಪಿಸಿದವರಿಗೆ ಸರಿಯಾಗಿ ಶಿಕ್ಷೆಯನ್ನು ಕೊಟ್ಟು ಇದರ ಸತ್ಯಾಸತ್ಯತೆಯನ್ನು ಸಮಾಜಕ್ಕೆ ತೋರಿಸಿ ಕೊಡಬೇಕು"ಎಂದು ಕ್ಷೇತ್ರದಲ್ಲಿ ಪ್ರಾರ್ಥಿಸಲಾಯಿತು ಎಂದು ಆಡಳಿತ ಮಂಡಳಿ ತಿಳಿಸಿದೆ.

Leave a Comment