ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬೆಂಜನಪದವಿನ ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ (ರಿ.)ಇದರ ಅಶ್ರಯದಲ್ಲಿ ನಿರ್ಮಿಸಲಾದ ನೂತನ ಅಯ್ಯಪ್ಪ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶವು ಹೆಚ್. ಶಂಕರ ಭಟ್ ಇವರ ನೇತೃತ್ವದಲ್ಲಿ ಹಾಗೂ ವೇ.ಮೂ. ಸತ್ಯೇಶ್ ಭಟ್ ಇವರ ಪೌರೋಹಿತ್ಯದಲ್ಲಿ ಜ.19ರಂದು ಆದಿತ್ಯವಾರ ಬೆಳಗ್ಗೆ ಬೆಂಜನ ಪದವಿನ ರಾಮನಗರದಲ್ಲಿ ನಡೆಯಲಿದೆ.
ಜ. 18ರಂದು ಸಂಜೆ 3ರಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ನಡೆಯಲಿದ್ದು ಬಳಿಕ ಭಜನೆ ವೈದಿಕ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಲಿದೆ.
ಜ. 19ರಂದು ಬೆಳಿಗ್ಗೆ ನೂತನ ಅಯ್ಯಪ್ಪ ಮಂದಿರದ ಲೋಕಾರ್ಪಣೆ
ಹಾಗೂ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆಯಲಿದೆ
ಸಂಜೆ ವೈದಿಕ ಕಾರ್ಯಕ್ರಮಗಳೊಂದಿಗೆ, ಸಾಂಸ್ಕೃತಿಕ ವೈವಿದ್ಯ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.














