ಬಂಟ್ವಾಳ:ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಶ್ರೀ ಮೂಕಾಂಬಿಕಾ ಕೃಪಾ ಶ್ರೀ ರಾಮ ಭಜನಾ ಮಂದಿರ (ರಿ.)ಇದರ 53ನೇ ವರ್ಷದ ಏಕಾಹ ಭಜನಾ ಮಹೋತ್ಸವವು ಜನವರಿ 06ರಿಂದ 08ವರೆಗೆ ನಡೆಯಲಿದೆ.
ಜ.06ರಂದು ಸೋಮವಾರ ಪೂರ್ವಾಹ್ನಪುಣ್ಯಾಹ ಸ್ಥಳ ಶುದ್ಧಿ, ತೋರಣ ಮುಹೂರ್ತ, ಗಣಹೋಮ ಪ್ರಸಾದ ವಿತರಣೆ ನಡೆಯಲಿದ್ದು,ಸಂಜೆ ಗಂಟೆ 6.00ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ ಗಂಟೆ 7.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ
ಅತಿಥಿಗಳಾಗಿ ರಾಜೇಶ್ ನಾಯ್ಡ್ ಉಳಿಪಾಡಿಗುತ್ತು, ಶಾಸಕರು, ಬಂಟ್ವಾಳ, ಬಿ. ರಮಾನಾಥ ರೈ, ಮಾಜಿ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಜಗನ್ನಾಥ ಚೌಟ ಬದಿಗುಡ್ಡೆ, ಸದಸ್ಯರು, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ನಾರಾಯಣ ಹೊಳ್ಳ ನೆತ್ರಕೆರೆ ಹೊಳ್ಳರಬೈಲು ಗುತ್ತು, ಸಮಾಜ ಸೇವಕರು, ಡಾ| ಮೋಹನ್‌ದಾಸ್ ರೈ, ಆಡಳಿತ ಮೊಕ್ತಸರರು,ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ದೇವಿಪುರ, ತಲಪಾಡಿ, ಪ್ರದೀಪ್ ಸರಿಪಳ್ಳ ವಿಶ್ವಹಿಂದೂ ಪರಿಷತ್ ವಿಭಾಗ ಪ್ರಚಾರ ಪ್ರಸಾರ ಪ್ರಮುಖ್, ಮಂಗಳೂರು, ಮಲ್ಲಿಕಾ ವಿ. ಶೆಟ್ಟಿ, ಅಧ್ಯಕ್ಷರು, ಅಮಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಕಳ್ಳಿಗೆ ಗ್ರಾ ಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಾಧಕರಾದ ಮನೋಜ್ ಕನಪಾಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಸದಾಶಿವ ಡಿ ತುಂಬೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಇವರಿಗೆ ಸನ್ಮಾನ ಹಾಗೂ ಕುಮಾರಿ ರಶ್ಮಿತಾ ಭಂಡಾರಿ ಪೆರಿಯೋಡಿಬೀಡು, ಸ್ನಾತಕೋತ್ತರ ಪದವಿಯಲ್ಲಿ
ಚಿನ್ನದ ಪದಕ ಪುರಸ್ಕೃತರು ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ರಾತ್ರಿ ಗಂಟೆ 9-00ರಿಂದ ಚೈತನ್ಯ ಕಲಾವಿದರು ಬೈಲೂರು ಇವರಿಂದ "ಅಷ್ಟಮಿ" ಸಾಂಸಾರಿಕ ಹಾಸ್ಯಮಯ ತುಳು ನಾಟಕ ನಡೆಯಲಿದೆ.
ಜ.07ನೇ ಮಂಗಳವಾರ ಸೂರ್ಯೋದಯಕ್ಕೆ ಶ್ರೀ ದೇವರ ಪ್ರಾರ್ಥನೆಯೊಂದಿಗೆ 53ನೇ ಏಕಾಹ ಭಜನೋತ್ಸವ ಪ್ರಾರಂಭ,ಪೂರ್ವಾಹ್ನ 9-00ಕ್ಕೆ ಜಾಮ ಪೂಜೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ ಸಂಜೆ ಗಂಟೆ 3-00ಕ್ಕೆ ಜಾಮ ಪೂಜೆ,ಸಂಜೆ ಗಂಟೆ 6-00ಕ್ಕೆ ಜಾಮ ಪೂಜೆ "ಶೋಭಾಯಾತ್ರೆ ಪ್ರಾರಂಭ"ರಾತ್ರಿ ಗಂಟೆ 9-00ಕ್ಕೆ ಮಹಾಪೂಜೆ, ಶೋಭಾಯಾತ್ರೆ ಹಿಂತಿರುಗಿದ ಬಳಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 12-00ಕ್ಕೆ : ಮಹಾಪೂಜೆ ನಡೆಯಲಿದೆ.
ಜ.08ನೇ ಬುಧವಾರ ಬೆಳಿಗ್ಗೆ ಗಂಟೆ 6.56ಕ್ಕೆ 53ನೇ ಏಕಾಹ ಭಜನೋತ್ಸವ ಮಹಾ ಮಂಗಳಾಚರಣೆ ಹಾಗೂ ಪ್ರಸಾದ ವಿತರಣೆ. ಸಂಜೆ ಗಂಟೆ 6-30ರಿಂದ 8-30ರ ತನಕ “ಆನಂದ ಭಜನೆ”ನಡೆಯಲಿದೆ
ಶೋಭಾಯಾತ್ರೆ
ಜ.07ನೇ ಮಂಗಳವಾರ ಸಂಜೆ ಗಂಟೆ 6.00ಕ್ಕೆ ಮಂದಿರದಿಂದ ಹೊರಟು ಶ್ರೀ ಕನಪಾಡಿತ್ತಾಯ ದೈವದ ಸನ್ನಿಧಿಯವರೆಗೆ ಸಾಗಿ ಅಲ್ಲಿಂದ ಹಿಂದಿರುಗಿ ಉಮನಗುಡ್ಡೆ ಮೂಲಕ ರಾಮಲ್ ಕಟ್ಟೆಯವರೆಗೆ ಸಾಗಿ ಅಲ್ಲಿ ಕಟ್ಟೆ ಪೂಜೆಯಾಗಿ, ಅಲ್ಲಿಂದ ಹಿಂದಿರುಗಿ ಬ್ರಹ್ಮರ ಗುಡಿ ಗಣಪತಿಕಟ್ಟೆಯವರೆಗೆ ಸಾಗಿ ಮಂದಿರಕ್ಕೆ ಬಂದು ಮಹಾಪೂಜೆ ನಡೆಯಲಿದೆ ಎಂದು ಭಜನಾ ಮಂದಿರದ ಅಧ್ಯಕ್ಷ ನವೀನ್ ಬಂಗೇರ ಪಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















