ಬಂಟ್ವಾಳ: ತಾಲೂಕಿನ ಪುದು ಗ್ರಾಮದ ನೆತ್ತರಕೆರೆ ಸಮೀಪದ ರೈಲ್ವೆ ಹಳಿಯ ಬದಿಯ ಪೊದೆಯಲ್ಲಿ ಸುಮಾರು 40 ವರ್ಷ ವಯಸ್ಸಿನ ಗಂಡಸಿನ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಬಂಟ್ವಾಳ ನಗರ ಪೋಲೀಸರು ಹಾಗೂ ಮಂಗಳೂರು ರೈಲ್ವೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಪರಿಚಿತ ವ್ಯಕ್ತಿಯ ತಲೆಯ ಮೇಲೆ ಗಾಯವಾದ ಕುರುಹುಗಳು ಕಂಡುಬಂದಿದ್ದು, ರಕ್ತಸಿಕ್ತ ಮಾದರಿಯಲ್ಲಿರುವ ಶವವನ್ನು ಕಂಡು ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.ಈತನ ಬಗ್ಗೆ
ಈವರೆಗೆ ಮಾಹಿತಿ ಲಭ್ಯವಾಗಿಲ್ಲ, ಆದರೆ ಈತ ರೈಲು ಪ್ರಯಾಣಿಕನ ಅಥವಾ ಪಾದಚಾರಿಯ ಎಂಬುದಕ್ಕೆ ಸ್ಪಷ್ಟವಾದ ಉತ್ತರವಿಲ್ಲ. ತನಿಖೆಯ ಬಳಿಕ ಸ್ಪಷ್ಟವಾಗದ ಮಾಹಿತಿ ಸಿಗಲಿದೆ.















