ಬಂಟ್ವಾಳ :ಶ್ರೀ ಮದ್ಭಾಗವತ ಮಹಾಪುರಾಣದ ಅಷ್ಟೋತ್ತರ ಶತ (108 )ಪಾರಾಯಣ ಮಹಾಯಜ್ಷ ಮತ್ತು ಗೋನವರಾತ್ರಿ ಉತ್ಸವ ೨೦೨೩ ದಕ್ಷಿಣ ಭಾರತದ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಶ್ರೀ ರಾಧಾ ಸುರಭಿ ಗೋಮಂದಿರ ದಲ್ಲಿ ಶ್ರೀ ಭಕ್ತಿ ಭೂಷಣದಾಸ್ ಪ್ರಭುಜಿ ಯವರ ಮಾರ್ಗದರ್ಶನ ದಲ್ಲಿ ಧರ್ಮ ರಕ್ಷಾರ್ಥ , ರಾಷ್ಟ್ರ ರಕ್ಷಾರ್ಥ, ಗೋ ರಕ್ಷಾರ್ಥ, ಉದ್ದೇಶ ದೊಂದಿಗೆ ಅಷ್ಟೋತ್ತರ ಶತ (108) ಶ್ರೀ ಮದ್ಭಾಗವತ ಕಥಾ ಪಾರಾಯಣ ಸಪ್ತಾಹ ಮಹಾ ಯಾಗ ದ ಮೂರನೇ ದಿನವು ನಿರಂತರ ಶ್ರೀ ಮದ್ಭಾಗವತ ಕಥಾ ಪಾರಾಯಣ ಹಾಗೂ16 ಕುಂಡಗಳಲ್ಲಿ ಪ್ರತಿದಿನ ದಂತೆ ಒಟ್ಟು 1108 ನಾರಾಯಣ ಕವಚ ಮಹಾಯಾಗ ಬೃಜೇಶ್ ಗೋಸ್ವಾಮಿ ಯವರ ನೇತೃತ್ವದಲ್ಲಿ ನಡೆಯುತ್ತಿದೆ.ಪ್ರತಿದಿನ ಮದ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯು ನಡೆಯುತ್ತಿದೆ.
ಅಖಿಲ ಭಾರತ ಗೋ ಸೇವಾ ಗತಿವಿದಿ ಅಧ್ಯಕ್ಷರಾದ ಅಜಿತ್ ಮಹಾಪಾತ್ರ ರವರು ಪಾಲ್ಗೊಂಡಿದ್ದರು . ಈ ಸಂದರ್ಭದಲ್ಲಿ ಗೌರಾವಾದ್ಯಕ್ಷ ಐತಪ್ಪ ಆಳ್ವ ಸುಜೀರ್ ಗುತ್ತು , ಕಾರ್ಯಾಧ್ಯಕ್ಷ ತಾರಾನಾಥ ಕೊಟ್ಟಾರಿ ತೇವು , ಕಾರ್ಯದರ್ಶಿ ದಾಮೋಧರ ನೆತ್ತರಕೆರೆ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ ಪುಂಚಮೆ , ಸಹ ಕೋಶಾಧಿಕಾರಿ ವಸಂತಿ ಎಲ್ ಶೆಟ್ಟಿ
, ಮಹಿಳಾ ಸಮಿತಿ ಸಂಚಾಲಕಿ ಜಯಶ್ರೀ ಕರ್ಕೇರ, ಸಂತೋಷ್ ಕುಮಾರ್ ರೈ ಬೋಳಿಯಾರ್ , ಭಾಸ್ಕರ ಚೌಟ ಕುಂಭ್ಡೇಲು , ನವೀನ್ ಕುಲಾಲ್ ಸುರಭಿ , ಪ್ರವೀಣ್ ಸರಳಾಯ , ನವೀನ್ ಚಾಪೆ ಮತ್ತಿತರರು ಉಪಸ್ಥಿತರಿದ್ದರು
ಗೋ ಗತಿವಿದಿ ಯ ಆಶ್ರಯದಲ್ಲಿ ಅಗ್ನಿಹೋತ್ರ ಬಗ್ಗೆ ಪ್ರಶಿಕ್ಷಣ ವರ್ಗ ವನ್ನು ಶಕ್ತಿ ದರ್ಶನ ಯೋಗಾಶ್ರಮದ ದೇವದಾಸ್ ರಾವ್ ರವರು ನಡೆಸಿಕೊಟ್ಟರು














