ಬಂಟ್ವಾಳ : ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಚಿವ ರಮಾನಾಥ ರೈ ಯವರ ವಿರುದ್ದ ಸ್ವಜಾತಿ ಬಾಂದವರು ವಿರೋಧ ಅಂತ ಸುದ್ದಿ ಹರಿದಾಡುತ್ತಿರುವುದರಿಂದ ಮತ್ತು ಅದರಲ್ಲಿ ತನ್ನ ಹೆಸರು ಕೂಡ ಬಂದಿದ್ದ ಕಾರಣ, ಈ ಮೂಲಕ ಸ್ಪಷ್ಟಪಡಿಸುದೇನೆಂದರೆ, ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ಚುನಾವಣೆ ರಾಜಕೀಯಕ್ಕೆ ನಿವೃತ್ತಿ ಪಡೆಯುವವರೆಗೆ ನಾನು ಅವರ ಚುನಾವಣಾ ಗೆಲುವಿಗೆ ಸಂಪೂರ್ಣವಾಗಿ ಸಹಕಾರ, ಬೆಂಬಲ ನೀಡುವುದರೊಂದಿಗೆ ಅವರ ಜೊತೆ ಇರುತ್ತೇನೆ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















