ಬಂಟ್ವಾಳ :ಶ್ರೀ ರಕ್ತೇಶ್ವರೀ ದೇವೀ ಸನ್ನಿಧಿ ಬಿ ಸಿ ರೋಡ್ ಇಲ್ಲಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಕುಂಭ ನಿಧಿಯ ಉದ್ಘಾಟನೆ ಮತ್ತು 48 ದಿವಸಗಳ ಸಂಧ್ಯಾ ಭಜನೆಯ ಪ್ರಾರಂಭೋತ್ಸವ ಸನ್ನಿಧಿಯಲ್ಲಿ ನಡೆಯಿತು.
ಬ್ರಹ್ಮ ಕಲಶ ಸಮಿತಿಯ ಕೋಶಾಧಿಕಾರಿ ನಾರಾಯಣ ಹೆಗ್ಡೆ ಬಿ ಸಿ ರೋಡ್ ಇವರು ಕುಂಭ ನಿಧಿಯ ಉದ್ಘಾಟನೆ ಯನ್ನು ನೆರವೇರಿಸಿದರು. ಸಂಧ್ಯಾ ಭಜನೆಯ ದೀಪ ಪ್ರಜ್ವಲನೆಯನ್ನು ಶ್ರೀಮತಿ ಮತ್ತು ಶ್ರೀ ರಘುಪತಿ ಭಟ್ ,ಅರ್ಚಕರು ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿ. ಶ್ರೀ ರಕ್ತೇಶ್ವರಿ ದೇವೀ ಸನ್ನಿಧಿಯ ಸೇವಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ , ಶ್ರೀಮತಿ ಮತ್ತು ಶ್ರೀ ಗೋಪಾಲ ಸುವರ್ಣ,ಶ್ರೀಮತಿ ಮತ್ತು ಶ್ರೀ ರಾಜೇಶ್ ಎಲ್ ನಾಯಕ್, ಶ್ರೀಮತಿ ಮತ್ತು ಶ್ರೀ ಸೋಮನಾಥ ನಾಯ್ಡು , ಮತ್ತು ಸದಸ್ಯರಾದ
ಶ್ರೀಮತಿ ಮತ್ತು ಶ್ರೀ ಶ್ರೀಧರ ಮಲ್ಲಿ ನೆರವೇರಿಸಿದರು.
ಸಮಾರಂಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ವಿಶ್ವನಾಥ,ಕಾರ್ಯದರ್ಶಿ ಶ್ರೀ ಶಿವಶಂಕರ್,ಕೋಶಾಧಿಕಾರಿ ಶ್ರೀ ಮೋಹನ್, ಸದಸ್ಯರಾದ ಶ್ರೀ ಸತೀಶ್ ಕುಮಾರ್, ಬ್ರಹ್ಮ ಕಲಶ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಗುರುಕೃಪ ,ಸಹ ಕೋಶಾಧಿಕಾರಿ ಶ್ರೀ ವಸಂತ್ ರಾವ್, ಸಮಿತಿಯ ಉಪಾಧ್ಯಕ್ಷರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿ, ಸಮಿತಿ ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀ ಶ್ರೀವತ್ಸ ಭಟ್ ಮತ್ತು ಶ್ರೀ ಸುದರ್ಶನ್ ಸಹಕರಿಸಿದರು.














