ಕುಮ್ಡೇಲ್ :ಶ್ರೀ ಕೊರ್ದಬ್ಬು ದೈವಸ್ಥಾನದ ಸಂಪರ್ಕ ರಸ್ತೆಯ ಕಾಂಕ್ರಿಟಿಕರಣಕ್ಕೆ ಶಿಲಾನ್ಯಾಸ.

Coastal Bulletin
ಕುಮ್ಡೇಲ್ :ಶ್ರೀ ಕೊರ್ದಬ್ಬು ದೈವಸ್ಥಾನದ ಸಂಪರ್ಕ ರಸ್ತೆಯ ಕಾಂಕ್ರಿಟಿಕರಣಕ್ಕೆ ಶಿಲಾನ್ಯಾಸ.

ಬಂಟ್ವಾಳ :ತಾಲೂಕಿನ ಪುದು ಗ್ರಾಮದ ಕುಮ್ಡೇಲ್ ಸರ್ಕಾರಿ ಶಾಲಾ ಬಳಿಯಿಂದ ಶ್ರೀ ಕೊರ್ದಬ್ಬು ದೈವಸ್ಥಾನದವರೆಗೆ ರಾಜ್ಯ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಇವರ ಎಂ ಎಲ್ ಸಿ ಅನುದಾನದ 5ಲಕ್ಷ ಹಾಗೂ ಪುದು ಪಂಚಾಯತ್ 5ಲಕ್ಷ ಅನುದಾನದ ಒಟ್ಟು 10ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆಯ ಕಾಂಕ್ರಿಟಿಕರಣಕ್ಕೆ ಶಿಲಾನ್ಯಾಸವನ್ನು ಶ್ರೀ ಕೊರ್ದಬ್ಬು ಕ್ಷೇತ್ರದ ಆಡಳಿತ ಮುಕ್ತೇಸರರಾದ ಭಾಸ್ಕರ ಚೌಟ ನೆರೆವೇರಿತು.

ಈ ಸಂದರ್ಭದಲ್ಲಿ ಬಾ ಜ ಪ ಮಂಗಳೂರು ಮಂಡಲದ ಉಪಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ, ಹಿಂದುಳಿದ ವರ್ಗಗಳ ಮಂಡಲ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ , ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಶೆಟ್ಟಿ ಸುಜೀರು, ಪುದು ಶಕ್ತಿ ಕೇಂದ್ರದ ಅಧ್ಯಕ್ಷ ಜಗನ್ನಾಥ ಸಾಲ್ಯಾನ್ ತುಂಬೆ, ಕಾರ್ಯದರ್ಶಿ ಸುಕೇಶ್ ಶೆಟ್ಟಿ ತೇವು, ಪುದು ಗ್ರಾ

ಪಂ ಸದಸ್ಯ ಸೋಮನಾಥ, ಸದಸ್ಯೆ ವಿದ್ಯಾ ಶೇಖರ್, ಶಾಂತ ಚೌಟ,ವಿಠ್ಠಲ್ ಸಾಲಿಯಾನ್,ಮಾಜಿ ಸದಸ್ಯ ಸಂತೋಷ್ ಕುಮಾರ್ ನೆತ್ತರಕೆರೆ ಮತ್ತಿತರರು ಉಪಸ್ಥಿತರಿದ್ದರು. 

ಪ್ರಮುಖರಾದ ಪ್ರಕಾಶ್ಚಂದ್ರ ರೈ ದೇವಸ್ಯ, ಐತಪ್ಪ ಆಳ್ವ ಸುಜೀರುಗುತ್ತು, ಉಮೇಶ್ ಸಾಲ್ಯಾನ್ ಬೆಂಜನಪದವು,ಚಂದ್ರಶೇಖರ ಗಾಂಭೀರ ಸುಜೀರುಗುತ್ತು,ರಾಧಾಕೃಷ್ಣ ತಂತ್ರಿ ಬೆಂಜನಪದವು, ಉಮೇಶ್ ಶೆಟ್ಟಿ ಬರ್ಕೆ, ಸಂತೋಷ್ ಕುಲಾಲ್ ನೆತ್ತರಕೆರೆ, ಜಗದೀಶ್ ಕಡೆಗೋಳಿ ಮತ್ತಿತರರು ಇದ್ದರು.

Leave a Comment