ಮೈಸೂರು: ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

Coastal Bulletin
ಮೈಸೂರು: ಅಪಾರ್ಟ್​ಮೆಂಟ್​ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ

ಮೈಸೂರು: ಇಲ್ಲಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್​ನಲ್ಲಿ ಇಂದು ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಚೇತನ (45), ಇವರ ಪತ್ನಿ ರೂಪಾಲಿ (43), ತಾಯಿ ಪ್ರಿಯಂವಧ (62) ಮತ್ತು ಮಗ ಕುಶಾಲ್ (15) ಮೃತಪಟ್ವವರೆಂದು ತಿಳಿದು ಬಂದಿದೆ.

ಚೇತನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತನ್ನ ತಾಯಿ, ಪತ್ನಿ ಮತ್ತು ಮಗನಿಗೆ ವಿಷ ಉಣಿಸಿದ ಬಳಿಕ ಚೇತನ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.

ಚೇತನ್ ಮೂಲತಃ ಹಾಸನ ಜಿಲ್ಲೆಯವರು. ಬೇರೆ ರಾಷ್ಟ್ರದಲ್ಲಿ ಕೆಲಸ ಮಾಡಲು ಇವರು ಕೆಲಸಗಾರರನ್ನು ನೇಮಕ ಮಾಡಿ ಕಳುಹಿಸುತ್ತಿದ್ದರು. ಸಾಲ

ಹೆಚ್ಚಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಆದರೆ ನಿಖರ ಕಾರಣ ಗೊತ್ತಾಗಿಲ್ಲ.

ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಡಿಸಿಪಿ ಜಾನ್ಹವಿ ಮತ್ತು ಇನ್ಸ್‌ಪೆಕ್ಟರ್ ಮೋಹಿತ್ ಸೇರಿ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment