ಕುಮ್ಡೇಲ್ :ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ. ಪುನಃ ಪ್ರತಿಷ್ಠ ಕಲಶಾಭಿಷೇಕ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

Coastal Bulletin
ಕುಮ್ಡೇಲ್ :ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನ. ಪುನಃ ಪ್ರತಿಷ್ಠ ಕಲಶಾಭಿಷೇಕ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಂಟ್ವಾಳ : ತಾಲೂಕಿನ ಪುದು ಗ್ರಾಮದ ಕುಮ್ಡೇಲ್ ಇಲ್ಲಿ ಶ್ರೀ ನಾಗಬ್ರಹ್ಮ ಸನ್ನಿಧಿ ಶ್ರೀ ಕೋರ್ದಬ್ಬು ದೈವಸ್ಥಾನವು ಸುಮಾರು 1.25ಕೋಟಿ ವೆಚ್ಚದಲ್ಲಿ ನೂತನವಾಗಿ ಪುನರ್ ನಿರ್ಮಾಣಗೊಂಡು ಶಿಲಾಮಯ ದೈವಾಲಯದಲ್ಲಿ ಶ್ರೀ ಕೋರ್ದಬ್ಬು ತನ್ನಿಮಾನಿಗ ಪರಿವಾರ ದೈವಗಳ ಪುನಃ ಪ್ರತಿಷ್ಠೆ, ಕಲಶಾಭಿಷೇಕ ಹಾಗೂ75ನೇ ವಾರ್ಷಿಕ ನೇಮೋತ್ಸವವು ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ಪೌರೋಹಿತ್ಯದಲ್ಲಿ ಎ. 20ರಿಂದಎ. 25ರ ತನಕ ನಡೆಯಲಿದ್ದು ಅ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸನ್ನಿಧಿಯಲ್ಲಿ ಫೆ. 16ರಂದು ಆದಿತ್ಯವಾರ ಬೆಳಿಗ್ಗೆ ನಡೆಯಿತು.

ದೈವಸ್ಥಾನ ಪುನರ್ ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಐತಪ್ಪ ಆಳ್ವ ಸುಜೀರುಗುತ್ತು, ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಸನಾತನ ಹಿಂದೂ ಧರ್ಮದ ಆಚಾರ ವಿಚಾರ, ಸಂಪ್ರದಾಯಗಳನ್ನು ಗೌರವಿಸಿ, ಜಾತಿ ಮತ ಪಂಥ ಬೇದವಿಲ್ಲದೆ ಎಲ್ಲರೂ ಶ್ರದ್ಧಾಭಕ್ತಿಯಿಂದ ಧಾರ್ಮಿಕ ಆಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಿಂದೂ ಸಮಾಜದ ಉನ್ನತಿಗೆ ಪಣ ತೊಡೋಣ ಎಂದು ಹೇಳಿದರು.

ಕ್ಷೇತ್ರದ ಆಡಳಿತ ಮುಕ್ತೇಸರಾದ ಭಾಸ್ಕರ ಚೌಟ ಕುಮ್ಡೇಲ್ ಮಾತನಾಡಿ, ಅನಾದಿ ಕಾಲದಿಂದ ಪೂಜೆಸುತ್ತ ಬಂದಿರುವ ಕೊರ್ದಬ್ಬು ಕ್ಷೇತ್ರದ ಇತಿಹಾಸವನ್ನು ತಿಳಿಸಿ, ಈ ಸಮಯದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವವುದು ನಮ್ಮೆಲ್ಲರ ಭಾಗ್ಯ ಎಲ್ಲರೂ ಈ ಪುಣ್ಯದ ಕೆಲಸದಲ್ಲಿ ಕೈಜೋಡಿಸಿ

ಎಂದು ವಿನಂತಿಸಿದರು.

ಗೌರವಾಧ್ಯಕ್ಷ ಉಮೇಶ್ ಶೆಟ್ಟಿ ಬರ್ಕೆ ಅವರು ದೈವಸ್ಥಾನ ಪುನರ್ ನಿರ್ಮಾಣದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿ ಸರ್ವರ ಸಹಕಾರವನ್ನು ಯಾಚಿಸಿದರು.ಕೋಶಾಧಿಕಾರಿ ಕೆ ಹರಿಕೃಷ್ಣ ಪಂಡಿತ್ ಖರ್ಚು ವೆಚ್ಚಗಳ ವಿವರಗಳ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಪುನರ್ ನಿರ್ಮಾಣ ಸಮಿತಿಯ ಗೌರವಧ್ಯಕ್ಷರಾದ ಪ್ರಕಾಶ್ಚಂದ್ರ ರೈ ದೇವಸ್ಯ,ಅಧ್ಯಕ್ಷ ಉಮೇಶ್ ಸಾಲ್ಯಾನ್ ಬೆಂಜನಪದವು, ಕಾರ್ಯಧ್ಯಕ್ಷರಾದ ಚಂದ್ರಶೇಖರ ಗಾಂಭೀರ ಸುಜೀರುಗುತ್ತು, ಗಣೇಶ್ ಸುವರ್ಣ ತುಂಬೆ, ರಾಧಾಕೃಷ್ಣ ತಂತ್ರಿ ಬೆಂಜನಪದವು,ಗುರಿಕಾರ ವೆಂಕಪ್ಪ  ಕುಮ್ಡೇಲ್ , ಟ್ರಸ್ಟಿಗಳಾದ ವಿಠ್ಠಲ ಸಾಲಿಯಾನ್ ಕುಮ್ಡೇಲ್ , ದೇವದಾಸ ಚೌಟ ಹರೀಶ್ ಪೆಲಪಾಡಿ ಉಪಸ್ಥಿತರಿದ್ದರು.

ರಾಜೇಶ್ ಕುಲಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ಜಗದೀಶ ಕಡೆಗೋಳಿ ಧನ್ಯವಾದವಿತ್ತರು.

Leave a Comment