ಪೊಳಲಿ :ಎಸ್.ಆರ್.ಹಿಂದೂ ಫ್ರೆಂಡ್ಸ್‌ ಸಂಘಟನೆಯ ಅದ್ದೂರಿ ದಶಮಾನೋತ್ಸವ ಸಂಭ್ರಮ.ದೇವಸ್ಥಾನಗಳು ಧರ್ಮ ಶಿಕ್ಷಣ ನೀಡುವ ಕೇಂದ್ರಗಳಾಗಲಿ :ಡಾ ಅರುಣ್ ಉಳ್ಳಾಲ್

Coastal Bulletin
ಪೊಳಲಿ :ಎಸ್.ಆರ್.ಹಿಂದೂ ಫ್ರೆಂಡ್ಸ್‌ ಸಂಘಟನೆಯ ಅದ್ದೂರಿ ದಶಮಾನೋತ್ಸವ ಸಂಭ್ರಮ.ದೇವಸ್ಥಾನಗಳು ಧರ್ಮ ಶಿಕ್ಷಣ ನೀಡುವ ಕೇಂದ್ರಗಳಾಗಲಿ :ಡಾ ಅರುಣ್ ಉಳ್ಳಾಲ್

ಬಂಟ್ವಾಳ : ನಮ್ಮ ಧರ್ಮದ ಬಗ್ಗೆ ಜ್ಞಾನ ಅರಿವು ಇಲ್ಲದೆ ಅನೇಕ ಸವಾಲುಗಳು ನಮ್ಮ ಸಮಾಜಕ್ಕೆ ಬಂದೊದಗಿದೆ,ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿಯೊಂದು ದೇವಸ್ಥಾನಗಳಲ್ಲಿ ಧರ್ಮ ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಿ ಹಿಂದೂಗಳ ಧಾರ್ಮಿಕ ಪ್ರಜ್ಞೆಯನ್ನು ಹೆಚ್ಚಿಸಬೇಕಿದೆ ಎಂದು ಉಪನ್ಯಾಸಕ ಡಾ ಅರುಣ್ ಉಳ್ಳಾಲ್ ಹೇಳಿದರು. ದೇವಸ್ಥಾನಗಳು ಧರ್ಮ ಶಿಕ್ಷಣ ನೀಡುವ ಕೇಂದ್ರಗಳಾಗಲಿ :ಡಾ ಅರುಣ್ ಉಳ್ಳಾಲ್.

ಅವರು ಪೊಳಲಿಯಲ್ಲಿ ಎಸ್.ಆರ್.ಹಿಂದೂ ಫ್ರೆಂಡ್ಸ್‌ ಇದರ ಅಶ್ರಯದಲ್ಲಿ ಫೆ.15ರಂದು ಶನಿವಾರ ದೇವಸ್ಥಾನದ ಚೆಂಡಿನಗದ್ದೆಯಲ್ಲಿ ನಡೆದ ಸಂಸ್ಥೆಯ ಸಂಭ್ರಮದ ದಶಮಾನೋತ್ಸವ ಸಮಾರಂಭದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತ,ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣದ ಈ ವರ್ಷ ನಮಗೆ ಅದೃಷ್ಟದ ಸಮಯ, ಈ ಸಂದರ್ಭದಲ್ಲಿ ನಾವು ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋದನ್, ನಾಗರೀಕ ಶಿಷ್ಟಚಾರಗಳ ಮೂಲಕ ಪರಿವರ್ತನೆಯ ಹಾದಿಯಲ್ಲಿ ಸಾಗಬೇಕಿದೆ, ಮನಸ್ಥಿತಿ ಬದಲಾದರೆ ಮನೆ ಸ್ಥಿತಿ ಬದಲಾಗುತ್ತದೆ, ಧರ್ಮ, ರಾಷ್ಟ್ರೀಯತೆಯ ಪ್ರೇರಣೆಯೊಂದಿಗೆ ಸಮಾಜ ಮುಖಿ ಸೇವೆ ಮಾಡುವ ಎಸ್ ಅರ್ ಫ್ರೆಂಡ್ಸ್ ಸಂಘಟನೆಯ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.


ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾ ನಂದ ಸ್ವಾಮೀಜಿ ಆಶೀರ್ವಾಚನ ಮಾಡಿ,ತ್ಯಾಗ ಮತ್ತು ಸೇವೆ ಈ ದೇಶದ ಅಡಿಗಲ್ಲು,ನಮ್ಮ ಉದ್ದಾರದೊಂದಿಗೆ ಜಗತ್ತಿನ ಉದ್ದಾರ ಮಾಡುವ, ಸಮಾಜವನ್ನು ದುಶ್ಚಟಗಳಿಂದ ಮುಕ್ತ ಮಾಡಿ ಪರಿಸರದ ಸ್ವಚ್ಛತೆಯನ್ನು ಕಾಪಾಡುವ ಕಾರ್ಯವನ್ನು ಸಂಘಟನೆಗಳು ಮಾಡಬೇಕು, ಧರ್ಮದ ಅನುಷ್ಠಾನ ಕಟ್ಟುನಿಟ್ಟಾಗಿ ಪಾಲಿಸಿ ಧರ್ಮ ಪ್ರಜ್ಞೆಯನ್ನು ಬೆಳೆಸಿ ಹಿಂದೂ ಸಮಾಜ ಗಟ್ಟಿಗೊಳಿಸೋಣ ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಸಂಘಟನೆಗಳು ಸಮಾಜದಲ್ಲಿ ಅವಶ್ಯಕತೆ ಇರುವ ಅರ್ಹ ಬಡ ಕುಟುಂಬಗಳನ್ನು ಗುರುತಿಸಿ ಸಹಾಯ ಹಸ್ತ ಚಾಚುವ ಅಗತ್ಯವಿದೆ,ಆರೋಗ್ಯ,ಅಶ್ರಯ, ಅಕ್ಷರ ಎಂಬ ಮೂಲ ಮಂತ್ರದೊಂದಿಗೆ ಹಿಂದೂ ಸಮಾಜವನ್ನು ಒಟ್ಟುಗೊಡಿಸಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಸಂಘಟನೆಯ ಸೇವಾ ಚಟುವಟಿಕೆಗಳನ್ನು

ಶ್ಲಾಘಿಸಿ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕಿ ಶಾರದಾ ಟೀಚರ್ ಹಾಗೂ ಶಿಕ್ಷಕ ಸುಬ್ರಾಯ ಕಾರಂತ, ವೈದ್ಯಕೀಯ ರಂಗದಲ್ಲಿ ಸೇವೆ ಸಲ್ಲಿಸಿದ ಡಾ ಪುಷ್ಪರಾಜ್ ಶೆಟ್ಟಿಇವರನ್ನು ಸನ್ಮಾನಿಸಲಾಯಿತು,

ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಚಿಂತನ್ ಪೂಜಾರಿ, ಭೂಷಣ್ ಪೂಜಾರಿ, ಕು ಮಾನ್ಯ,ಇವರನ್ನು ಅಭಿನಂದಿಸಲಾಯಿತು.

ಎಸ್ ಅರ್ ಹಿಂದೂ ಫ್ರೆಂಡ್ಸ್ ಸಂಘಟನೆಯ ರೂವಾರಿ ವೆಂಕಟೇಶ್ ನಾವಡ ದಂಪತಿಗಳನ್ನು ಹಾಗೂ ಕೋಶಾಧಿಕಾರಿ ಪ್ರಶಾಂತ್ ಕುಲಾಲ್ ಅಮ್ಮುಂಜೆ ಅವರನ್ನು ಗೌರವಿಸಲಾಯಿತು. ಐದು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಲಾಯಿತು

ವೇದಿಕೆಯಲ್ಲಿ ಡಾ ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ವಕೀಲರಾದ ಪ್ರಸಾದ್ ಕುಮಾರ್ ರೈ,ಉಡುಪಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಸೌಮ್ಯ, ಉದ್ಯಮಿ ಉಮೇಶ್ ಸಾಲ್ಯಾನ್ ಬೆಂಜನಪದವು,ನಿವೃತ್ತ ಸೇನಾನಿ ಅನಿಶ್ ಆಚಾರ್ಯ, ಶುಭ ಸಮೂಹ ಸಂಸ್ಥೆಗಳ ಮಾಲಕ ಭುವನೇಶ್ ಪಚ್ಚಿನಡ್ಕ,ಉದ್ಯಮಿ ಸುಕೇಶ್ ಚೌಟ, ಅರ್ಚಕ ಅನಂತ ಪದ್ಮನಾಭ ಭಟ್, ಕರಿಯಂಗಳ ಗ್ರಾ ಪಂ ಮಾಜಿ ಸದಸ್ಯ ಕಿಶೋರ್ ಪಾಲ್ಲಿಪಾಡಿ, ಎಸ್ ಅರ್ ಹಿಂದೂ ಫ್ರೆಂಡ್ಸ್ ನ ಅಧ್ಯಕ್ಷ ಅಜಿತ್ ಪೊಳಲಿ ಉಪಸ್ಥಿತರಿದ್ದರು.

ವೆಂಕಟೇಶ್ ನಾವಡ ಸ್ವಾಗತಿಸಿ, ಖ್ಯಾತ ಯಕ್ಷ ಸಂಘಟಕ ಬಿ ಜನಾರ್ದನ ಅಮ್ಮುಂಜೆ ಕಾರ್ಯಕ್ರಮ ನಿರೂಪಿಸಿದರು.

ಬೆಳಿಗ್ಗೆ ಪೊಳಲಿ ದೇವಸ್ಥಾನದ ಸರ್ವಮಂಗಳ ಸಭಾಂಗಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ ನಡೆಯಿತು,ಸಂಜೆ ಸ್ಥಳೀಯ ಶಾಲಾ ಮಕ್ಕಳ ಸಂಸ್ಕೃತಿಕ ವೈವಿದ್ಯ,ನಂತರ ಪೊಳಲಿ ಮ್ಯೂಸಿಕಲ್ ನೈಟ್ಸ್ ಸಂಗೀತ ರಸ ಸಂಜೆ ಹಾಗೂ ಚೈತನ್ಯ ಕಲಾವಿದರು ಬೈಲೂರು ಇವರ ಅಭಿನಯದ ಅಷ್ಟಮಿ ತುಳು ನಾಟಕ ಪ್ರದರ್ಶನಗೊಂಡಿತು.

Leave a Comment