ಬಂಟ್ವಾಳ: ಧರ್ಮಸ್ಥಳ ಧಮರ್ಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ಕನಸಿನಂತೆ ರೈತರು ಮತ್ತು ಮಹಿಳೆಯರು ಸಹಿತ ಗ್ರಾಮೀಣ ಜನತೆಗೆ ಸ್ವ ಉದ್ಯೋಗ ತರಬೇತಿ ಜೊತೆಗೆ ಆಥರ್ಿಕ ಸ್ವಾವಲಂಬನೆ ಮೂಡಿಸಲು ರೂಪಿಸಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಕರ್ಾರ ಮತ್ತು ಸಕರ್ಾರೇತರ ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿದರ್ೇಶಕ ಸತೀಶ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಸರಪಾಡಿ ಯುವಕ ಮಂಡಲದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಗ್ಗ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಸಹಭಾಗಿತ್ವದಲ್ಲಿ ಮಂಗಳವಾರ ನಡೆದ 'ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸಾಧನಾ ಸಮಾವೇಶ ಮತ್ತು ಟೈಲರಿಂಗ್ ತರಬೇತಿ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಗ್ಗ ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ಪುರುಷೋತ್ತಮ ಬಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯೋಜನಾಧಿಕಾರಿ ಜಯಾನಂದ ಪಿ.,
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ ಜೈನ್, ಒಕ್ಕೂಟ ಕೇಂದ್ರ ಸಮಿತಿ ಅಧ್ಯಕ್ಷ ಚಿದಾನಂದ ರೈ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಅಶೋಕ್ ಶೆಟ್ಟಿ ಸರಪಾಡಿ ಶುಭ ಹಾರೈಸಿದರು.
ಯುವಕ ಮಂಡಲ ಅಧ್ಯಕ್ಷ ಸಂತೋಷ್ ಶೆಟ್ಟಿ, ಪತ್ರಕರ್ತ ಕಿರಣ್ ಸರಪಾಡಿ, ಒಕ್ಕೂಟ ವಲಯಾಧ್ಯಕ್ಷ ಉಮೇಶ್, ಮೇಲ್ವಿಚಾರಕಿ ಸುಜಾತ ಪಿ. ಮತ್ತಿತರರು ಇದ್ದರು.ಇದೇ ವೇಳೆ ಶಿಕ್ಷಕಿ ನಂದಾದೀಪ ಇವರನ್ನು ಸನ್ಮಾನಿಸಲಾಯಿತು.
ಸೇವಾ ಪ್ರತಿನಿಧಿ ಮಾಧವ ಸ್ವಾಗತಿಸಿ, ಮೋಹಿನಿ ವಂದಿಸಿದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.













